ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಆಗಸ್ಟ್ 24 ರ ದಿನಾಂಕಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ-ಚಿಕ್ಕಮಗಳೂರು ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿದೆ.
ಆಗಸ್ಟ್ 24ರಂದು 56271 ಸಂಖ್ಯೆಯ ಶಿವಮೊಗ್ಗ ಟೌನ್-ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ರೈಲು ಶಿವಮೊಗ್ಗ ಟೌನ್ ಮತ್ತು ಬೀರೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬೀರೂರಿನಿಂದ ಅದರ ನಿಗದಿತ ಸಮಯದಲ್ಲಿ ಪ್ರಯಾಣ ಆರಂಭಿಸಲಿದೆ.
ಈ ರೈಲು ಶಿವಮೊಗ್ಗದಿಂದ ಬೀರೂರವರೆಗೂ ಸಂಚರಿಸುವುದಿಲ್ಲ. ಬದಲಾಗಿ, ನಿಗದಿಯಾಗಿರುವ ಸಮಯದಂತೆಯೇ ಬೀರೂರಿನಿಂದ ಚಿಕ್ಕಮಗಳೂರುವರೆಗೂ ಸಂಚರಿಸಲಿದೆ.ರೈಲುಗಳ ಪ್ರಯಾಣದಲ್ಲಿ ನಿಯಂತ್ರಣ
ಆಗಸ್ಟ್ 24ರಂದು ಹೊರಡುವ ಈ ಕೆಳಗಿನ ರೈಲುಗಳ ಪ್ರಯಾಣದಲ್ಲಿ ನಿಯಂತ್ರಣವಿರುತ್ತದೆ. ರೈಲು ಸಂಖ್ಯೆ 16587 ಯಶವಂತಪುರ-ಬಿಕಾನೇರ್ ದ್ವಿ-ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ಯಶವಂತಪುರದಿಂದ 60 ನಿಮಿಷ ತಡವಾಗಿ ಹೊರಡಲಿದೆ ಮತ್ತು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 18112 ಯಶವಂತಪುರ-ಟಾಟಾನಗರ ಸಾಪ್ತಾಹಿಕ ಎಕ್ಸ್’ಪ್ರೆಸ್, 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್’ಪ್ರೆಸ್, ಮತ್ತು 12725 ಕೆಎಸ್’ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ದೈನಿಕ ಎಕ್ಸ್’ಪ್ರೆಸ್ ರೈಲುಗಳನ್ನು ಮಾರ್ಗಮಧ್ಯೆ 60-75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಮತ್ತು ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ವಿಶ್ವಮಾನವ ದೈನಿಕ ಎಕ್ಸ್’ಪ್ರೆಸ್ ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
ಆಗಸ್ಟ್ 23ರಂದು ರದ್ದಾದ ರೈಲು
- 06270 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ರದ್ದು
ಆಗಸ್ಟ್ 24ರಂದು ಒಂದು ದಿನ ರದ್ದಾದ ರೈಲು
- ಮೈಸೂರು-ಎಸ್’ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ (06269)
- ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್’ಪ್ರೆಸ್ (16226)
- ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್’ಪ್ರೆಸ್ (16225)
- ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ (56267)
- ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ (56268)
- ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ (56266)
- ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ (56265)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post