ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ರಾಮಜನ್ಮಭೂಮಿಯಲ್ಲಿ ಶ್ರೀ 1008 ಸತ್ಯಾರ್ಥ ತೀರ್ಥರ 50ನೇ ವರ್ಧಂತಿ ಉತ್ಸವ ಆಯೋಜಿಸಲಾಗಿದ್ದು, ಫೆ.22ರಂದು ಬೆಳಿಗ್ಗೆ ಶ್ರೀ ರಾಮತಾರಕ ಮಹಾಯಾಗದ ಅಂಗವಾಗಿ ಕಳಶ ಸ್ಥಾಪನೆ, 10:30ಕ್ಕೆ ಮೂಲರಾಮದಂದ್ರ ದೇವರ ಸಂಸ್ಥಾನಪೂಜೆ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ 5ಕ್ಕೆ ಬದುಕಿನಲ್ಲಿ ಯಾವುದು ಮುಖ್ಯ ಸು-ವರ್ಣವೋ? ಸುವರ್ಣವೋ? ವಿಷಯದ ಮೇಲೆ ಸುವರ್ಣ ಮಂಥನ ನಡೆಯಲಿದ್ದು, ಪಂ. ಪ್ರವೀಣಾಚಾರ್ಯ ಹುನಗುಂದ, ಪಂ. ಅನಿರುದ್ಧಾಚಾರ್ಯ ಪಾಂಡುರಂಗಿ, ಪಂ. ಆನಂದಾಚಾರ್ಯ ಗುಮಾಸ್ತೆ ಮತ್ತು ಪಂ. ರಘೂತ್ತಮಾಚಾರ್ಯ ಸೊಂಡೂರು ಪಾಲ್ಗೊಳಲಿದ್ದು, ಆನಂದರ್ತೀ ಆಚಾರ್ಯ ಮಹಿಷಿ ನಿರ್ಣಾಯಕರಾಗಿ ಉಪಸ್ಥಿತರಿರಲಿದ್ದಾರೆ.

ಫೆ.23ರಂದು ಅಯೋಧ್ಯೆ ಪ್ರಮೋದವನ ಶ್ರೀ ಉತ್ತರಾದಿಮಠದಲ್ಲಿ ಸಮಗ್ರ ವಾಲ್ಮೀಕಿ ರಾಮಾಯಣ ಕನ್ನಡ ಅನುವಾದ ಗ್ರಂಥಗಳ ಲೋಕಾರ್ಪಣೆಗೊಳ್ಳಲಿದ್ದು, ಜಗದ್ಗುರು ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುತ್ತರಾದಿಮಠಾಧೀಶ ಶ್ರೀ 1008 ಸತ್ಯಾತಮತೀರ್ಥ ಶ್ರೀಪಾದಂಗಳವರು ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಸಂಜೆ 4ಕ್ಕೆ ಜನ್ಮಭೂಮಿಯಲ್ಲಿ ಶ್ರೀರಾಮನಿಗೆ ಭವ್ಯ ಮೆರವಣಿಗೆ ಹಾಗೂ ಸಂಜೆ 5:30ಕ್ಕೆ ಶ್ರೀ ಸೀತಾರಾಮ ಕಲ್ಯಾಣೋತ್ಸವ, ಸಂಜೆ 6ಕ್ಕೆ ಶ್ರೀ ಜಯತೀರ್ಥ ವಿದ್ಯಾಪೀಠ ಪ್ರಾಂಶುಪಾಲ ಪಂ.ಪೂ. ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ ಹಾಗೂ ಹೈದರಾಬಾದ್‌ನ ಪಂ. ಜಯತೀರ್ಥಾಚಾರ್ಯ ಪಗಡಾಲ್ ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಸಂಜೆ 7ಕ್ಕೆ ಮಹಾಸ್ವಾಮಿಗಳವರ ಅಮೃತೋಪದೇಶ ಮಹಾಮಂತ್ರಕ್ಷತೆ ವಿತರಿಸಲಾಗುವುದು.












Discussion about this post