ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಭವ್ಯ ರಾಮಮಂದಿರದಲ್ಲಿ ವಿರಾಜಮಾನನಾಗಿರುವ ಶ್ರೀರಾಮಚಂದ್ರ ಪ್ರಭುವಿನ ವಿಗ್ರಹವನ್ನು ಇನ್ನುಮುಂದೆ `ಬಾಲಕ್ ರಾಮ್’ Balak Ram ಎಂಬ ಹೆಸರಿನಿಂದ ಕರೆಯಲು ತೀರ್ಮಾನ ಮಾಡಲಾಗಿದೆ.
ಈ ಕುರಿತಂತೆ ದೇವಾಲಯದ ಅರ್ಚಕ ಅರುಣ್ ದೀಕ್ಷಿತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಭಗವಾನ್ ರಾಮನ ವಿಗ್ರಹವನ್ನು ಬಾಲಕ್ ರಾಮ್ ಎಂದು ನಾಮಕರಣ ಮಾಡಲಾಗಿದ್ದು, ಈ ಹೆಸರಿನಿಂದಲೇ ಇನ್ನು ಮುಂದೆ ಕರೆಯಲಾಗುತ್ತದೆ ಎಂದರು.
Also read: ಮೊದಲ ದಿನ ಎಷ್ಟು ಭಕ್ತರು ಅಯೋಧ್ಯೆ ಬಾಲರಾಮನ ದರ್ಶನ ಪಡೆದಿದ್ದಾರೆ?
ರಾಮ ದೇವರ ವಿಗ್ರಹವು ಐದು ವರ್ಷದ ಬಾಲಕ ನಿಂತಿರುವ ಭಂಗಿಯಲ್ಲಿದೆ. ಹೀಗಾಗಿ, ಈ ಹೆಸರನ್ನು ನಾಮಕರಣ ಮಾಡಲಾಗಿದೆ. ಮೊದಲ ಬಾರಿಗೆ ನಾನು ವಿಗ್ರಹವನ್ನು ನೋಡಿದಾಗ, ನಾನು ರೋಮಾಂಚನಗೊಂಡೆ. ನನ್ನ ಮುಖದಲ್ಲಿ ಕಣ್ಣೀರು ಸುರಿಯಲಾರಂಭಿಸಿತು. ಆಗ ನಾನು ಅನುಭವಿಸಿದ ಭಾವನೆಯನ್ನು ವಿವರಿಸಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post