ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ರಾಮಲಲ್ಲಾ ಪ್ರತಿಷ್ಠಾಪನಾ Ramalalla Prathishtapane ಕಾರ್ಯ ನಿನ್ನೆ ಪೂರ್ಣಗೊಂಡ ಬೆನ್ನಲ್ಲೇ ಇಂದಿನಿಂದ ಸಾರ್ವಜನಿಕರ ದರ್ಶನಕ್ಕೆ ತೆರೆದಿದ್ದು, ರಾಮನ ದರ್ಶನಕ್ಕಾಗಿ ಅಯೋಧ್ಯೆ ತುಂಬಿತುಳುಕುತ್ತಿದೆ.
ದೇಶ ಹಾಗೂ ವಿದೇಶಗಳಿಂದ ರಾಮಭಕ್ತರು ಹರಿದುಬರುತ್ತಿದ್ದು, ಸಾವಿರಾರು ಭಕ್ತರು ದರ್ಶನ ಪಡೆಯುತ್ತಿದ್ದಾರೆ.

Also read: ರಾಹುಲ್ ನ್ಯಾಯ ಯಾತ್ರೆ ಮೇಲಿನ ದಾಳಿ ಹೇಯ ಕೃತ್ಯ: ಈಶ್ವರ ಖಂಡ್ರೆ
ದರ್ಶನ ಸಮಯ ನಿಗದಿ
ಭಕ್ತರಿಗೆ ಬಾಲರಾಮನ ದರ್ಶನಕ್ಕಾಗಿ ಎರಡು ಅವಧಿಯನ್ನು ನಿಗದಿಪಡಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ Shriram Janmabhoomi Thirtha Kshethra Trust ತಿಳಿಸಿದೆ.

ನಿತ್ಯ ಸಂಜೆ 6.30ಕ್ಕೆ ವಿಶೇಷ ಭಜನೆ, ಶೃಂಗಾರ ಆರತಿ ಕಾರ್ಯಕ್ರಮ ನಡೆಯಲಿದ್ದು, ಒಂದು ದಿನ ಮೊದಲೇ ಭಕ್ತರು ತಮ್ಮ ಸ್ಥಾನವನ್ನು ಕಾಯ್ದಿರಿಸಬೇಕು.
ಸಂಜೆ 7 ಗಂಟೆಗೆ ಬಾಲರಾಮನಿಗೆ ಆರತಿ ನೆರವೇರಲಿದ್ದು, ಆರತಿ ದರ್ಶನಕ್ಕಾಗಿ ಬರುವ ಭಕ್ತರು ಟ್ರಸ್ಟ್ ಕಚೇರಿಯಲ್ಲಿ ಮುಂಚಿತವಾಗಿ ಪಾಸ್ ಪಡೆದಿರಬೇಕು ಎಂದು ಅವರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post