No Result
View All Result
MEIL 700 Million Investment 1 Lakh Crore Valuation
English Articles

Global Investors Back MEIL Group in $700 Million Structured Investment; MEIL Valued at ₹1 lakh Crore

by kalpa News
November 20, 2026
0

Kalpa Media House  |  Hyderabad  |  Megha Engineering and Infrastructures Limited (MEIL) Group has raised approximately $700 million through an...

Read moreDetails
Pneumonia or Common Cold The Differece Before Its Too Late!

Why pneumonia should never be mistaken for a common cold

November 16, 2026
South Western Railway Jeevan Pramaan 5 Camps Mysuru Division Nov 2026

South Western Railway Announces Jeevan Pramaan 5.0 Camps; Check Dates & Venues

November 4, 2026
Dasara Celebrations at Prasanna Venkateswara Swamy Temple

Resplendent Dasara Celebrations at Prasanna Venkateswara Swamy Temple

November 2, 2026
Cyclone Arnab Effect Jharkhand Alert 15 Dist Heavy Rain

Cyclone Arnab Effect: Jharkhand Braces for Heavy Rain and Winds Up to 60 kmph

October 29, 2026
  • Advertise With Us
  • Grievances
  • About Us
  • Contact Us
Sunday, November 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

ಅಯೋಧ್ಯೆಗೆ 5,000 ಕಿ.ಮೀ. ಬೈಕ್ ಯಾತ್ರೆ: ಚಾಮರಾಜನಗರದ ಯುವಕ ಕರ್ಣಗೆ ಸನ್ಮಾನ

kalpa News by kalpa News
November 29, 2026
in News, ಚಾಮರಾಜನಗರ
0
Ayodhya bike yatra youth Karna honoured
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  | 

ಭಾರತದ ಧಾರ್ಮಿಕ ಕೇಂದ್ರಗಳು ಹಾಗೂ ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ ಯುವಕರು ಮತ್ತು ವಿದ್ಯಾರ್ಥಿಗಳು ಭೇಟಿ ನೀಡಿ, ಅಲ್ಲಿನ ಇತಿಹಾಸ, ಪರಂಪರೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅಧ್ಯಯನ ಮಾಡಬೇಕು ಎಂದು ಸಂಸ್ಕೃತಿ ಚಿಂತಕ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ಕರೆ ನೀಡಿದರು. ಚಾಮರಾಜನಗರ (Chamarajanagara) ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ಚಾಮರಾಜೇಶ್ವರ ಸ್ನೇಹ ಬಳಗದ ವತಿಯಿಂದ ದ್ವಿಚಕ್ರ ವಾಹನದಲ್ಲಿ ಅಯೋಧ್ಯೆಗೆ ಪ್ರಯಾಣ (Ayodhya bike yatra) ಕೈಗೊಂಡು ಮರಳಿದ ಬ್ಯಾಡಮೂಡ್ಲು ಗ್ರಾಮದ ಯುವಕ ಕರ್ಣ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಡಿ ಜಿಲ್ಲೆಯ ಯುವಕ ಕರ್ಣ ಅವರು ಧೈರ್ಯ, ಸಾಹಸ ಮತ್ತು ಅಪಾರ ಭಕ್ತಿಯಿಂದ ಸುಮಾರು 5,000 ಕಿ.ಮೀ. ದೂರದ ಅಯೋಧ್ಯೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಬೆಳೆಸಿ, ದೇಶದ ಕೋಟ್ಯಂತರ ಜನರ ಶ್ರದ್ಧಾಕೇಂದ್ರವಾಗಿರುವ ಶ್ರೀರಾಮನ ಜನ್ಮಭೂಮಿಗೆ ಭೇಟಿ ನೀಡಿ ದರ್ಶನ ಪಡೆದು ಮರಳಿರುವುದು ಹೆಮ್ಮೆಯ ಸಂಗತಿಯಾಗಿದೆ. ಜಗತ್ತಿನಾದ್ಯಂತ ಪ್ರವಾಸಿಗರು ಮತ್ತು ಭಕ್ತರನ್ನು ಆಕರ್ಷಿಸುತ್ತಿರುವ ಅಯೋಧ್ಯೆಗೆ ಇಂತಹ ಧಾರ್ಮಿಕ ಪ್ರವಾಸ ಕೈಗೊಂಡಿರುವುದು ಇತರ ಯುವಕರಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು.

PES Shivamogga

ಧರ್ಮ, ಭಕ್ತಿ ಹಾಗೂ ಪ್ರವಾಸ ಚಟುವಟಿಕೆಗಳು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಪ್ರವಾಸದಿಂದ ಹೊಸ ಅನುಭವಗಳು ದೊರೆಯುವುದರ ಜತೆಗೆ ವಿವಿಧ ಪ್ರದೇಶಗಳ ಇತಿಹಾಸ, ಸಂಸ್ಕೃತಿ, ಆಚಾರ-ವಿಚಾರ ಮತ್ತು ಜೀವನ ಪದ್ಧತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಯುವಕನೂ ತನ್ನ ಗ್ರಾಮದ ಇತಿಹಾಸ ಹಾಗೂ ದೇಶದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಪ್ರತಿ ಗ್ರಾಮದಲ್ಲಿರುವ ದೇವಾಲಯಗಳು, ಪ್ರಾಚೀನ ಗುಡಿ-ಗೋಪುರಗಳು ಹಾಗೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಯುವಕರು ಮುಂದಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸಾಂಸ್ಕೃತಿಕ ಪರಂಪರೆಯ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸಂಘಟಿತರಾಗಿ ಯುವಕರ ಪಡೆಗಳನ್ನು ರಚಿಸಿಕೊಂಡು ಧರ್ಮ, ಸಂಸ್ಕೃತಿ, ಪರಿಸರ ಮತ್ತು ಪರಂಪರೆಯ ಸಂರಕ್ಷಣೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಇಂದು ದೇಶದಲ್ಲಿ ಪ್ರವಾಸಿಗರು ಹಾಗೂ ಭಕ್ತರು ಧಾರ್ಮಿಕ ಕೇಂದ್ರಗಳಿಗೆ ಸುಲಭವಾಗಿ ಭೇಟಿ ನೀಡಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಉತ್ತಮ ರಸ್ತೆ ಸಂಪರ್ಕ, ಅಗತ್ಯ ಸೌಲಭ್ಯಗಳು ಹಾಗೂ ಶ್ರದ್ಧಾಕೇಂದ್ರಗಳ ಸುಧಾರಿತ ನಿರ್ವಹಣೆಯಿಂದ ಪ್ರವಾಸ ಕೈಗೊಳ್ಳುವುದು ಸುಲಭವಾಗಿದೆ. ಹೀಗಾಗಿ ಯುವಕರು ಧೈರ್ಯ ಮತ್ತು ಭಕ್ತಿಯಿಂದ ದೇಶದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡು ಅಲ್ಲಿನ ವಿಶೇಷತೆಗಳನ್ನು ಅರಿತುಕೊಳ್ಳಬೇಕು. ನಮ್ಮ ಪರಂಪರೆ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯೂ ಯುವಜನರ ಮೇಲಿದೆ ಎಂದು ತಿಳಿಸಿದರು.

Kalahamsa Infotech private limited

ಪ್ರತಿಯೊಬ್ಬರಿಗೂ ಭಗವಂತ ನೀಡಿರುವ ಅವಕಾಶ, ಸಾಮರ್ಥ್ಯ ಮತ್ತು ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಭಗವಂತನಿಗೆ ಭಕ್ತಿಯಿಂದ ಸೇವೆ ಸಲ್ಲಿಸುವುದರ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಕರ್ಣ ಅವರ ಸಾಹಸಮಯ ಧಾರ್ಮಿಕ ಪ್ರವಾಸ ಯುವ ಸಮುದಾಯದಲ್ಲಿ ಹೊಸ ಉತ್ಸಾಹ ಮತ್ತು ಪ್ರೇರಣೆ ಮೂಡಿಸಲಿ ಎಂದು ಆಶಿಸಿದರು.

Also Read>> ಸರಳ ಜೀವನ, ಮಾನವೀಯ ಮೌಲ್ಯಗಳೇ ಕನಕದಾಸರ ಬದುಕಿನ ಸಂದೇಶ: ಸುರೇಶ್ ಋಗ್ವೇದಿ

Ayodhya: ಕರ್ಣಗೆ ಸನ್ಮಾನ

ಅಯೋಧ್ಯೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿ ಶ್ರೀರಾಮನ ದರ್ಶನ ಪಡೆದು ಮರಳಿದ ಯುವಕ ಕರ್ಣ ಅವರನ್ನು ಸಮಾಜ ಸೇವಕರಾದ ವೆಂಕಟ ನಾಗಪ್ಪ ಶೆಟ್ಟಿ, ಮಹೇಶ್ ಹಾಗೂ ಸುರೇಶ್ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಶ್ರೀ ಚಾಮರಾಜೇಶ್ವರ ಸ್ನೇಹ ಬಳಗದ ವತಿಯಿಂದ ನಡೆದ ಈ ಸನ್ಮಾನ ಕಾರ್ಯಕ್ರಮದಲ್ಲಿ ಯುವಕನ ಸಾಹಸ ಮತ್ತು ಭಕ್ತಿಯನ್ನು ಶ್ಲಾಘಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಚಳವಳಿಯ ಹಿರಿಯ ಹೋರಾಟಗಾರರಾದ ಶಾ ಮುರಳಿ, ರಾಜಗೋಪಾಲ್, ಆನಂದ್ ಭಗೀರಥ, ಕಾಂತರಾಜು, ಸುರೇಶ್ ನಾಗ್ ಹರದನಹಳ್ಳಿ, ಶ್ರೀ ಚಾಮರಾಜೇಶ್ವರ ಸ್ನೇಹ ಬಳಗದ ಬಂಡಿಗಾರ್ ಮಹೇಶ್, ಸುರೇಶ್, ರಂಗಸ್ವಾಮಿ, ಸ್ವಾಮಿ, ಪ್ರಜ್ವಲ್, ಚೆನ್ನೀಪುರದ ಮೋಳೆ ಜಯಕುಮಾರ್, ನಾರಾಯಣ, ನಾಗೇಶ್, ವಿಶ್ವಾಸ್, ಕುಮಾರ್ ಕನ್ನಡ, ಶಿವಲಿಂಗಮೂರ್ತಿ, ನಂಜಪ್ಪ ಶೆಟ್ಟಿ, ಆರಾಧ್ಯ ಹಾಗೂ ಜಗದೀಶನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Christ King

Kalpa News Advertising Disclaimer

Tags: AyodhyaChamarajanagaraಅಯೋಧ್ಯೆಚಾಮರಾಜನಗರದ್ವಿಚಕ್ರ ವಾಹನ ಪ್ರಯಾಣ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸರಳ ಜೀವನ, ಮಾನವೀಯ ಮೌಲ್ಯಗಳೇ ಕನಕದಾಸರ ಬದುಕಿನ ಸಂದೇಶ: ಸುರೇಶ್ ಋಗ್ವೇದಿ

kalpa News

kalpa News

No Result
View All Result
MEIL 700 Million Investment 1 Lakh Crore Valuation
English Articles

Global Investors Back MEIL Group in $700 Million Structured Investment; MEIL Valued at ₹1 lakh Crore

by kalpa News
November 20, 2026
0

Kalpa Media House  |  Hyderabad  |  Megha Engineering and Infrastructures Limited (MEIL) Group has raised approximately $700 million through an...

Read moreDetails
Pneumonia or Common Cold The Differece Before Its Too Late!

Why pneumonia should never be mistaken for a common cold

November 16, 2026
South Western Railway Jeevan Pramaan 5 Camps Mysuru Division Nov 2026

South Western Railway Announces Jeevan Pramaan 5.0 Camps; Check Dates & Venues

November 4, 2026
Dasara Celebrations at Prasanna Venkateswara Swamy Temple

Resplendent Dasara Celebrations at Prasanna Venkateswara Swamy Temple

November 2, 2026
Cyclone Arnab Effect Jharkhand Alert 15 Dist Heavy Rain

Cyclone Arnab Effect: Jharkhand Braces for Heavy Rain and Winds Up to 60 kmph

October 29, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL