ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಅಯೋಧ್ಯೆಯಲ್ಲಿ ರಾಮ ಲಲ್ಲಾ Ayodhya Rama Lalla ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ರಾಮದೇವರ ಮೂರ್ತಿ ಗರ್ಭಗುಡಿ ಪ್ರವೇಶಿಸಿದೆ.
ಹೌದು… ಪ್ರತಿಷ್ಠಾಪನಾ ಕಾರ್ಯಕ್ರಮದ ಪೂರ್ವಭಾವಿ ಕಾರ್ಯಕ್ರಮಗಳು ಯಾವುದೇ ರೀತಿಯ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುತ್ತಿದ್ದು, ಇದರ ಭಾಗವಾಗಿ ನಿನ್ನೆ ಸಂಜೆ ರಾಮ ಲಲ್ಲಾನ ವಿಗ್ರಹವನ್ನು ಗರ್ಭಗುಡಿಗೆ ತೆಗೆದುಕೊಂಡು ಹೋಗಲಾಯಿತು.

ನಿನ್ನೆ ಮಧ್ಯಾಹ್ನ 1.20ರ ಸುಮಾರಿಗೆ ಜಲ ಯಾತ್ರೆಯೊಂದಿಗೆ ಆಚರಣೆಗಳು ಪ್ರಾರಂಭವಾದವು. ಇದರಲ್ಲಿ ಗರ್ಭಗುಡಿಯನ್ನು ಸ್ವಚ್ಛಗೊಳಿಸಲು ಸರಯು ನದಿಯ ನೀರನ್ನು ಬಳಸಲಾಯಿತು.

Also read: ಇಂಡಿಗೋ ವಿಮಾನ ಸಂಸ್ಥೆಗೆ 1.20 ಕೋಟಿ ರೂ. ದಂಡ ವಿಧಿಸಿದ್ದೇಕೆ? ಇಷ್ಟಕ್ಕೂ ನಡೆದಿದ್ದೇನು?
ಇನ್ನು ಸುಮಾರು 500 ಮಹಿಳೆಯರು ಸರಯು ಘಾಟ್’ನಿಂದ ರಾಮ ಮಂದಿರದವರೆಗೆ ಜಲ ಕಲಶ ಯಾತ್ರೆಯಲ್ಲಿ ಪಾಲ್ಗೊಂಡರು, ನದಿಯಿಂದ ನೀರನ್ನು ತಮ್ಮ ಕಲಶದಲ್ಲಿ ಸಾಗಿಸಿದರು.

ಕೃಷ್ಣ ಶಿಲಾ ಅಥವಾ ಕಪ್ಪು ಕಲ್ಲಿನಲ್ಲಿ ಕೆತ್ತಲಾದ ನೂತನ ವಿಗ್ರಹವನ್ನು ಸುಮಾರು 150ರಿಂದ 200 ಕೆಜಿ ತೂಕವಿದೆ. ಈ ವಿಗ್ರಹವನ್ನು ಕರಸೇವಕಪುರಂ ಬಳಿಯ ಕಾರ್ಯಾಗಾರದಿಂದ ಮುಚ್ಚಿದ ಟ್ರಕ್’ನಲ್ಲಿ ಭಾರೀ ಭದ್ರತೆಯ ನಡುವೆ ದೇವಸ್ಥಾನದ ಆವರಣಕ್ಕೆ ತರಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post