ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿಚಾರ ದೇಶದಾದ್ಯಂತ ಸುದ್ದಿ ಮಾಡಿರುವುದು ಒಂದೆಡೆಯಾದರೆ, ಮಕರ ಸಂಕ್ರಮಣ ಹತ್ತಿರವಿರುವ ಹಿನ್ನೆಲೆಯಲ್ಲಿ ಶಬರಿಮಲೆಗೆ ಭೇಟಿ ನೀಡರುವ ಅಯ್ಯಪ್ಪ ಭಕ್ತರ ಸಂಖ್ಯೆ ಈಗ ಲಕ್ಷಾಂತರ.
ಎಲ್ಲೆಲ್ಲಿ ನೋಡಿದರೂ ಅಯ್ಯಪ್ಪ ಮಾಲಾಧಾರಿಗಳು ನಿಮಗೆ ಕಾಣಸಿಗುತ್ತಾರೆ. ಧರ್ನುಮಾಸದ ಚಳಿ ಒಂದೆಡೆ ಕೊರೆಯುತ್ತಿದ್ದರೂ ಲೆಕ್ಕಿಸದೇ ಅದೇ ಕೊರೆಯುವ ನೀರಿನಲ್ಲಿ ಸ್ನಾನ ಮಾಡಿ ಭಕ್ತ ಭಾವದಿಂದ ಅಯ್ಯಪ್ಪ ನನ್ನು ಪೂಜಿಸುತ್ತಾರೆ. ಇಂತಹ ಪೂಜೆಯ ವೇಳೆ ಅಯ್ಯಪ್ಪ ಭಕ್ತರೊಬ್ಬರ ಮೇಲೆ ಅಯ್ಯಪ್ಪ ಸ್ವಾಮಿಯ ವಾಹನ ಹುಲಿಯ ಆವಾಹನೆಯಾಗಿದೆ ಎಂಬ ಒಂದು ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಘಟನೆ ನಡೆದಿದ್ದು ಎಲ್ಲಿ ಎಂಬುದು ತಿಳಿದುಬಂದಿಲ್ಲ. ಆದರೆ, ಅಯ್ಯಪ್ಪ ನ ಭಜನೆ ಮಾಡುತ್ತಿರುವ ವೇಳೆ, ಭಕ್ತಿಯಿಂದ ಹಾಡುತ್ತಿರುವ ಮಾಲಾಧಾರಿಯೋರ್ವರು ಹುಲಿಯಂತೆ ವರ್ತಿಸಲು ಆರಂಭಿಸುತ್ತಾರೆ. ಅಯ್ಯಪ್ಪ ನ ವಾಹನ ಹುಲಿಯೇ ಇವರ ಮೇಲೆ ಆವಾಹನೆಯಾಗಿದೆ ಎಂದು ಈ ಈ ವೀಡಿಯೋ ವೈರಲ್ ಆಗಿದೆ. ಭಕ್ತಿಯ ಪರವಷತೆಯನ್ನು ಇದೆ ತೋರಿಸುತ್ತದೆ. ಸರಿಯಾಗಿ ಗಮನಿಸಿದರೆ ನಿಮಗೆ ತಿಳಿಯುವುದು ಆ ಹಾವ ಭಾವ ಒಂದು ಹುಲಿಯ ಹಾಗೆ ಎಂದು ಅಯ್ಯಪ್ಪ ಸ್ವಾಮಿಯ ಚರಿತ್ರೆಯಲ್ಲಿ ಹುಲಿಯ ವಿಚಾರ ನಮಗೆಲ್ಲ ತಿಳಿದಿರುವುದು. ಹಾಗಾಗಿ ಸ್ವಾಮಿಗಳಲ್ಲಿ ಇದು ಹುಲಿ ಸ್ವಾಮಿ ಎನ್ನುವ ಭಯ ಭಕ್ತಿ ಹುಟ್ಟಿದೆ.
ವೀಡಿಯೋ ನೋಡಿ:
ಇದೇ ವೇಳೆ ಇನ್ನೊಂದು ಮಾತು, ಇತರ ಸಮುದಾಯವನ್ನು ಮತಾಂತರಿಸಲು ಮಾಡುವ ನಾಟಕಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಭಕ್ತಿಯಿಂದ, ಅಲ್ಲಿ ಯುಕ್ತಿಯಿಂದ ನಾಟಕೀಯ ರೀತಿಯಲ್ಲಿ ವರ್ತಿಸುತ್ತಾರೆ ಎಂಬ ವಿಚಾರ ಈ ವೈರಲ್ ವೀಡಿಯೋದಲ್ಲಿ ಹೈಲೈಟ್ ಆಗಿದೆ.
Discussion about this post