ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಪ್ರಿಯಾಂಕ್ ಖರ್ಗೆ #PriyankKharge ಶತಮೂರ್ಖ, ಮುಸ್ಲೀರನ್ನು ಖುಷಿಪಡಿಸಲು ಏನೇನೋ ಮಾತಾಡ್ತಾನೆ ಎಂದು ಸಚಿವ ಖರ್ಗೆಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಟಕ್ಕರ್ ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಮರನ್ನು ಖುಷಿಪಡಿಸಲು ಈ ಬಚ್ಚಾ ಏನೇನೋ ಮಾತಾಡ್ತಾನೆ. ಸೂರ್ಯ, ಚಂದ್ರ ಇರೋವರೆಗೂ ಆರ್’ಎಸ್’ಎಸ್ ಇರುತ್ತದೆ. ಸಿದ್ದರಾಮಯ್ಯ ಮಗ ಯತೀಂದ್ರ, ಜತೀಂದ್ರ, ಹರಿಪ್ರಸಾದ್ ಪಾಕಿಸ್ಥಾನ ಏಜೆಂಟ್ ರೀತಿ ಮಾತಾಡ್ತಾರೆ. ಯತೀಂದ್ರ ಏನು ಮಾತಾಡ್ತಾನೆ ಗೊತ್ತೆ ಆಗಲ್ಲ. ಪ್ರಿಯಾಂಕ್ ಖರ್ಗೆ ಅಪ್ಪನಿಗೆ ಆರ್’ಎಸ್’ಎಸ್ ಬ್ಯಾನ್ ಮಾಡಲು ಆಗಲಿಲ್ಲ, ಅವನಿಗೆ ಆಗುತ್ತಾ ಎಂದ ಟಾಂಗ್ ಕೊಟ್ಟರು.
ಪ್ರಿಯಾಂಕ್ ಖರ್ಗೆ ಅಪ್ಪನಿಗೆ ಆರ್’ಎಸ್’ಎಸ್ #RSS ಬ್ಯಾನ್ ಮಾಡಲು ಆಗಲಿಲ್ಲ. ಇನ್ನು ಅವನಿಂದ ಆಗುತ್ತಾ. ಪ್ರಿಯಾಂಕ್ ಖರ್ಗೆ ಶತಮೂರ್ಖ. ನೆಹರೂ, ಇಂದಿರಾ ಗಾಂಧಿಗೆ ಆರ್’ಎಸ್’ಎಸ್ ನಿಷೇಧ ಮಾಡಲು ಆಗಲಿಲ್ಲ. ಮುಸ್ಲಿಮರನ್ನು ಖುಷಿಪಡಿಸಲು ಈ ಬಚ್ಚಾ ಏನೇನೋ ಮಾತಾಡ್ತಾನೆ. ಸೂರ್ಯ, ಚಂದ್ರ ಇರೋವರೆಗೂ ಆರ್’ಎಸ್’ಎಸ್ ಇರುತ್ತದೆ ಎಂದರು.
ಇನ್ನು, ರಾಜಕಾರಣದಲ್ಲಿ ಮಾಟಮಂತ್ರ ಮಾಡುವವರು ಇದ್ದಾರೆ. ಬಿಜೆಪಿಯಲ್ಲಿ ಮಾಟಮಂತ್ರ ಮಾಡುವ ಒಂದು ಕುಟುಂಬ ಇದೆ. ಯತ್ನಾಳ್ ಹಾಳಾಗಲಿ ಎಂದು ಪೂಜೆ ಮಾಡಿಸಿ ಬರ್ತಾರೆ. ಆದರೆ ನನಗೆ ಯಾವುದೇ ಮಾಟಮಂತ್ರ ತಗುಲುವುದಿಲ್ಲ. ಕುಮಾರಸ್ವಾಮಿ ಆರೋಗ್ಯ ಹಾಳಾಗಲು ಮಾಟಮಂತ್ರ ಕಾರಣ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post