ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ |
ಇಲ್ಲಿನಿಂದ ವಾಸ್ಕೋಗೆ ತೆರಳುತ್ತಿದ್ದ ಬಸ್’ನಲ್ಲಿ ಮಹಿಳೆ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕಳೆದುಕೊಂಡಿದ್ದು, ಈ ಕುರಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ಕೇವಲ ಹತ್ತೇ ನಿಮಿಷದಲ್ಲಿ ಪತ್ತೆ ಮಾಡಿರುವ ಘಟನೆ ನಡೆದಿದೆ.
ಬಾಗಲಕೋಟೆಯಿಂದ ವಾಸ್ಕೋಗೆ ಹೋಗುವ ಬಸ್ಸಿನಲ್ಲಿ ಮಹಿಳೆಯೊಬ್ಬರು ರಾಮನಗರ ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳೆದುಕೊಂಡಿದ್ದರು. #Losses Mobile in Bus ಕೂಡಲೇ ಪೊಲೀಸ್ ಠಾಣೆಗೆ ಬಂದು ತಿಳಿಸಿದ್ದಾರೆ.
Also read: 1971ರ ಜನಗಣತಿ ಆಧಾರದಲ್ಲೇ ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಮಾಡಿ | ಎಂ.ಕೆ. ಸ್ಟಾಲಿನ್ ಒತ್ತಾಯ
ಮಾಹಿತಿಯ ಆಧಾರದಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ 10 ನಿಮಿಷದಲ್ಲೇ ಮೊಬೈಲ್ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ವಾರಸುದಾರರು ಪೊಲೀಸರ ಕಾರ್ಯವೈಖರಿ ಬಗ್ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
19 ಮೊಬೈಲ್ ಪತ್ತೆ!
ಇನ್ನು, ಪೋರ್ಟಲ್ ಬಳಸಿ ಫೆಬ್ರವರಿ-2025 ಮಾಹೆಯಲ್ಲಿ ಪತ್ತೆ ಮಾಡಲಾದ ಸುಮಾರು ಒಟ್ಟು ರೂ. 3.8 ಲಕ್ಷ ಮೌಲ್ಯದ 19 ಮೊಬೈಲ್ ಫೋನ್ ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಜಿ¯್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಿಂದಿರುಗಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post