ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ |
ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾರರನ್ನು ಆಕರ್ಷಿಸಲು ಮತದಾರರಿಗೆ ಮತದಾನದ ಮಮತೆಯ ಕರೆಯೋಲೆ ಶೀರ್ಷಿಕೆಯ ಆಮಂತ್ರಣ ಪತ್ರಿಕೆ ನೀಡಲು ಜಿಲ್ಲಾ ಸ್ವೀಪ್ SVEEP ಸಮಿತಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಪ್ರಸಕ್ತ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ, ಜಿಲ್ಲಾ ಪಂಚಾಯತ ಸಿಇಓ ಟಿ.ಬೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಸಾರಥ್ಯದಲ್ಲಿ ನಿತ್ಯ ಒಂದಿಲ್ಲೊಂದು ಮತದಾನ ಜಾಗೃತಿಗಾಗಿ ವಿನೂತನ ಕಾರ್ಯಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈ ಪ್ರಯೋಗದ ಮುಂದುವರೆದ ಭಾಗವಾಗಿ ಮತದಾರರಿಗೆ ಮದುವೆಯ ಆಮಂತ್ರಣದ ರೂಪದಲ್ಲಿ ಮತದಾನದ ಮಮತೆಯ ಕರೆಯೋಲೆ ನೀಡಲು ಸಿದ್ದತೆ ಮಾಡಿಕೊಂಡಿದೆ.
ಮತದಾನದ ಮಮತೆಯ ಕರೆಯೋಲೆ ಶಿರ್ಷಿಕೆಯ ಆಮಂತ್ರಣ ವಿತರಣೆ ಕಾರ್ಯಕ್ಕೆ ರಾಜ್ಯ ನೋಡಲ್ ಸ್ವೀಪ್ ಅಧಿಕಾರಿಗಳು ಬುಧವಾರ ಚಾಲನೆ ನೀಡಿದ್ದಾರೆ. ಈ ಆಮಂತ್ರಣ ಪತ್ರಿಕೆಯ ಮುಖ ಪುಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಜಿಲ್ಲಾ ಸ್ವೀಪ್ ಸಮಿತಿಯು ಮತದಾರರ ಮಮತೆಯ ಕರೆಯೋಲೆ ಎಂಬ ಶಿರ್ಷಿಕೆ ಇಡಲಾಗಿದ್ದು, ಇದರಲ್ಲಿ ಮತದಾನದ ದಿನ ಮೇ 10, ಮುಹೂರ್ತ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ, ನಮ್ಮ ಮತ ನಮ್ಮ ಭವಿಷ್ಯ, ನಿಮ್ಮ ಹೆಸರು ನಮ್ಮ ಚುನಾವಣಾ ಮತದಾರರ ಪಟ್ಟಿಯಲ್ಲಿದೆ. ತಪ್ಪದೇ ಬಂದು ಮತದಾನ ಮಾಡಬೇಕಾಗಿ ವಿನಂತಿ. ಕೊನೆಗೆ ನಿಮ್ಮ ಆಗಮನವೇ ಆಶೀರ್ವಾದ, ಮತದಾನವೇ ಉಡುಗೊರೆ ಎಂದು ಬರೆಯಲಾಗಿದೆ.
Also read: ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಕಿತ್ತು ಪರಾರಿ: ದೂರು ದಾಖಲು
ಎರಡನೇ ಪುಟದಲ್ಲಿ ಮೇ 10 ರಂದು ಬುಧವಾರ ದಿನ ಸಮಯ ಬೆ.7 ರಿಂದ ಸಂಜೆ 6 ರಂದು ಸಲ್ಲುವ ಶುಭಲಗ್ನದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ನಡೆಸಲು ಭಾರತ ಚುನಾವಣಾ ಆಯೋಗವು ತೀರ್ಮಾನಿಸಿರುತ್ತದೆ. ಆದ್ದರಿಂದ ತಾವುಗಳು ತಮ್ಮ ಕುಟುಂಬದ ಅರ್ಹ ಮತದಾರರೊಂದಿಗೆ ನಿಮ್ಮ ಮತದಾನವಿರುವ ಮತಗಟ್ಟೆಗೆ ಆಗಮಿಸಿ, ನೈಯಿಕ ಮತ ಚಲಾಯಿಸಬೇಕಾಗಿ ವಿನಂತಿಸಲಾಗಿದೆ. ತಮ್ಮ ಸುಖಾಗಮನ ಬಯಸುವವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು, ಬಾಗಲಕೋಟೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಸ್ವೀಪ್ ಸಮಿತಿ, ಬಾಗಲಕೋಟೆ ಹಾಗೂ ಸಮಸ್ತ ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿಗಳು ಎಂದು ಬರೆಯಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post