ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ |
ರಬಕವಿ- ಬನಹಟ್ಟಿ ತಾಲೂಕಿನ ಬನಹಟ್ಟಿ ಕೆರೆಯಲ್ಲಿ ಈಜಲು ತೆರೆಳಿದ್ದ 6 ಬಾಲಕರು ಪೈಕಿ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ನೆ ಸಂಜೆ ನಡೆದಿದೆ.
ಮೃತ ಬಾಲಕರನ್ನು ಸಂಜಯ್ ಲಕ್ಷ್ಮಣ ತಳವಾರ್ (13), ಸಮರ್ಥ ಸದಾಶಿವ ತಳವಾರ್ (10) ಎಂದು ಗುರುತಿಸಲಾಗಿದೆ.
ಸಂಜಯ್ ಹಾಗೂ ಸಮರ್ಥ ಈಜಲು ಕೆರೆ ಬಳಿ ಹೋಗಿದ್ದಾರೆ. ಈ ವೇಳೆ ಸಮರ್ಥ್ ನೀರಿನಿಂದ ಹೊರಬರಲು ಆಗದೆ ಪರದಾಡಿದ್ದಾನೆ.
Also read: ಎಟಿಎಸ್ ಆಪರೇಷನ್ | BJP, RSS ನಾಯಕರ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಉಗ್ರರ ಬಂಧನ
ಇದನ್ನು ಗಮನಿಸಿದ ಸಂಜಯ್ ಮುಳುಗುತ್ತಿದ್ದ ಸಮರ್ಥ್’ನನ್ನು ಹಿಡಿಯಲು ಹೋಗಿದ್ದಾನೆ. ಆದರೆ ಇಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಪೊಲೀಸರು ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post