ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ |
ತಲೆಗೆ ಹೇರ್ ಕಲರ್ ಹಾಕುವ ವಿಚಾರದಲ್ಲಿ ಸಲೂನ್ ಒಂದರಲ್ಲಿ ಆರಂಭಗೊಂಡು ವಾಗ್ವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಬನಹಟ್ಟಿಯಲ್ಲಿ ನಡೆದಿದೆ.
ತಾಲೂಕಿನ ಆಸಂಗಿಯಲ್ಲಿ ಘಟನೆ ನಡೆದಿದ್ದು, ಕೊಲೆಯಾದ ಯುವಕನನ್ನು ಸಾಗರ್ ಆವಟಿ ಹಾಗೂ ಕ್ಷೌರಿಕ ಸದಾಶಿವ ಸಾವಿ ಆರೋಪಿ ಎಂದು ಗುರುತಿಸಲಾಗಿದೆ.
ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಕಲರ್ ಹಚ್ಚಿಸುವುದಕ್ಕೆ ಮುಂದಾಗಿದ್ದನು. ಇನ್ನೊಂದು ಟೇಬಲ್’ನಲ್ಲಿ ಸದಾಶಿವ ನಾವಿ ಬೇರೊಬ್ಬನ ಕಟಿಂಗ್ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಸಲೂನ್ ಮಾಲೀಕನು ಸಾಗರ್’ಗೆ ಕಲರ್ ಹಚ್ಚುವುದಕ್ಕೆ ರೂ. 20 ಕೊಡುವುದಾಗಿ ಹೇಳಿದ್ದನು. ನಂತರದಲ್ಲಿ ಸದಾಶಿವ ನಾವಿ ಇದಕ್ಕೆ ತಕರಾರು ತೆಗೆದು ಜಗಳಕ್ಕೆ ಇಳಿದಿದ್ದಾನೆ. ಈ ಜಗಳ ತಾರಕಕ್ಕೆ ಏರಿದ್ದು, ಅಲ್ಲೇ ಇದ್ದ ಕತ್ತರಿಯಿಂದ ಸದಾಶಿವ ಆತನಿಗೆ ಚುಚ್ಚಿದ್ದಾನೆ.
Also read: ಪೋಷಕರಿಗೆ ಕಿರುಕುಳ ನೀಡುವ ಮಕ್ಕಳನ್ನು ಮನೆಯಿಂದ ಹೊರಹಾಕಿ: ನ್ಯಾಯಾಲಯ
ಸಾಗರನನ್ನು ತತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post