ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023 ರ ಅಂಗವಾಗಿ ಮೇ 10 ರಂದು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸುಸೂತ್ರವಾಗಿ ಶಾಂತತೆಯಿಂದ ಮತದಾನ ನಡೆದಿದ್ದು, ಜಿಲ್ಲೆಯ 56 ಅಭ್ಯರ್ಥಿಗಳ ಭವಿಷ್ಯ ಇವಿಯಂನಲ್ಲಿ EVM ಭದ್ರವಾಗಿದೆ.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಮತ ಕೇಂದ್ರಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆಯು ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರ ತಾಂತ್ರಿಕ ಇಂಜಿನಿಯರ್ ಮಹಾವಿದ್ಯಾಲಯದಲ್ಲಿ ಮೇ 13, ಶನಿವಾರ ಬೆಳಗ್ಗೆ 08 ರಿಂದ ನಡೆಯಲಿದೆ. ಐದು ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿರುವ ಭದ್ರತಾ ಕೊಠಡಿಯಲ್ಲಿ ಅಧಿಕಾರಿಗಳಿಂದ ಸೀಲ್ ಮಾಡಿ ಸುರಕ್ಷಿತವಾಗಿ ಇರಿಸಲಾಗಿದೆ.

Also read: ರವೀಂದ್ರನಾಥ ಟ್ಯಾಗೋರ್‌ರನ್ನು ಅರಿತಿರುವ ಮತ್ತು ಅವರ ತತ್ವಗಳನ್ನು ಅನುಸರಿಸುವ ಕೆಲವೇ ನಾಯಕರಲ್ಲೊಬ್ಬರು ಅಮಿತ್ ಶಾ
ಮತ ಎಣಿಕೆ ಕೇಂದ್ರ ಸುತ್ತ 200 ಮೀ. ನಿರ್ಬಂಧಿತ ಪ್ರದೇಶ:
ಜಿಲ್ಲೆಯ 05 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೇ 13 ರಂದು ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯಲ್ಲಿ ಮತ ಎಣಿಕೆ ನಡೆಯಲಿದ್ದು, ಮೇ 13 ರ ಬೆಳಗ್ಗೆ 06 ರಿಂದ ಮಧ್ಯರಾತ್ರಿ 12 ರವರೆಗೆ ಸಿಆರ್‍ಪಿಸಿ 1973 ರ ಕಲಂ 144 ಮತ್ತು 144 (ಎ) ರಡಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಲಾಗಿರುತ್ತದೆ ಹಾಗೂ ಮತ ಎಣಿಕೆ ಕೇಂದ್ರದ ಸುತ್ತ-ಮುತ್ತ 200 ಮೀಟರ್ ಪ್ರದೇಶವನ್ನು ನಿಬರ್ಂಧಿತ ಪ್ರದೇಶವೆಂದೂ ಈಗಾಗಲೇ ಜಿಲ್ಲಾ ದಂಡಾಧಿಕಾರಿ, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ.












Discussion about this post