ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಸುಮಾರು ಒಟ್ಟು 6,033 ಪ್ರಕರಣಗಳು ಇತ್ಯರ್ಥಗೊಂಡು, 62.47 ಕೋಟಿ ರೂ. ಪರಿಹಾರ ಹಣ ಒಳಗೊಂಡಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಹೆಚ್. ಪುಷ್ಪಾಂಜಲಿ ದೇವಿ ಅವರು ತಿಳಿಸಿದ್ದಾರೆ.
ಈ ರಾಷ್ಟ್ರೀಯ ಲೋಕ ಅದಾಲತ್‍ನ ಬೈಠಕ್‍ಗಳಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್, ಕ್ರಿಮಿನಲ್ ಪ್ರಕರಣಗಳು, 85 ವಿಮಾ ಪರಿಹಾರ ಸಂಬಂಧ ಪಟ್ಟ ಪ್ರಕರಣಗಳು, 33 ಮರಳಿಗೆ ಸಂಬಂಧಿಸಿದ ಪ್ರಕರಣಗಳು, 08 ಕಾರ್ಮಿಕ ಪ್ರಕರಣಗಳು, 47 ಬ್ಯಾಂಕ್ ಪ್ರಕರಣಗಳು, 46 ಹಣ ವಸೂಲಿ ಪ್ರಕರಣಗಳು, 1150 ಬರ್ತ್ ಅಂಡ್ ಡೆತ್ ಪ್ರಕರಣಗಳು, 26 ಮೋಟಾರು ಅಪಘಾತ ಅಮಲ್ಜಾರಿ ಪ್ರಕರಣಗಳು, 09 ಕೌಟುಂಬಿಕ ದೌರ್ಜನ್ಯ ಪ್ರಕಣಗಳು ಸೇರಿದಂತೆ ಒಟ್ಟು 6033 ಪ್ರಕರಣಗಳು ವಿಲೆಯಾಗಿರುತ್ತವೆ ಎಂದು ಅವರು ತಿಳಿಸಿದ್ದಾರೆ.

ರಾಜಿ ಆಗುವ 87 ಕ್ರಿಮಿನಲ್ ಪ್ರಕರಣಗಳು, 258 ಚೆಕ್ ಪ್ರಕರಣಗಳು, 87 ಪಾಲುವಿಭಾಗ ದಾವೆಗಳು, 35 ಸ್ಪೆಸಿಫಿಕ್ ಪರ್ಫಾಮೆನ್ಸ್ ದಾವೆಗಳು, 58 ಎಲ್‍ಎಸಿ ಅಮಲ್ದಾರಿ ಪ್ರಕರಣಗಳು ಇತ್ಯರ್ಥಗೊಂಡವು.
ಲೋಕ ಅದಾಲತ್‍ನ ಯಶಸ್ಸಿಗೆ ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷರಿಗೆ, ಎಲ್ಲಾ ನ್ಯಾಯಾಧೀಶರುಗಳಿಗೆ, ಎಲ್ಲಾ ವಕೀಲರಿಗೆ, ಸಿಬ್ಬಂದಿ ವರ್ಗದವರಿಗೆ, ಕಕ್ಷಿದಾರರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅಭಿನಂದನೆ ತಿಳಿಸಿದ್ದಾರೆ.
Also read: ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ: ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post