ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕು ಮಿಟ್ಟೇಸೂಗುರು ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಮಾರಿಕಾಂಬಾ ದೇವಿಯ 9ನೇ ದಿನದ ಶರನ್ನವರಾತ್ರಿ #Sharannavarathri ಮಹೋತ್ಸವ ಪ್ರಯುಕ್ತ ಆಗಮಿಸಿದ ಕಾಮವರಂ ಗ್ರಾಮದ ಶ್ರೀ ರಾಮ ಪ್ರಕಾಶ್ ತಾತನವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.
ನಂತರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ವಿಗ್ರಹ ಹಾಗೂ ಧ್ವಜಸ್ತಂಭ ಮತ್ತು ಶ್ರೀ ಈಶ್ವರ ದೇವಸ್ಥಾನದಲ್ಲಿ ಗಣೇಶ ವಿಗ್ರಹಕ್ಕೆ ತಾತನವರು ಪೂಜೆ ಸಲ್ಲಿಸಿದರು.
ಶ್ರೀ ಮಾರಿಕಾಂಬಾ ದೇವಿಯ ಮಂಟಪದಲ್ಲಿ ನಡೆದ ಶ್ರೀ ಶರನ್ನವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ರಾಮ ಪ್ರಕಾಶ್ ತಾತನವರು ಆಶೀರ್ವಾದ ಮಾಡಿದರು.
ಗ್ರಾಮದ ಹಿರಿಯರಾದ ಶ್ರೀ ಕೆ. ವೆಂಕಟರೆಡ್ಡಿ ತಾತನವರು ರಿಂದ ಕಾಮವರಂ ಗ್ರಾಮದ ಪರಮ ಪೂಜ್ಯರಾದ ಶ್ರೀ ರಾಮ ಪ್ರಕಾಶ್ ತಾತನವರಿಗೆ ಗೌರವ ಸಮರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಕೆ. ವೆಂಕಟರೆಡ್ಡಿ ತಾತ ಹಾಗೂ ಸಮಾಜ ಸೇವಕರು ಮತ್ತು ಶಾಸಕರ ಆಪ್ತರಾದ ಮಂಜುನಾಥ ರೆಡ್ಡಿ, ಗ್ರಾಮದ ಮುಖಂಡರಾದ ನಾಗಭೂಷಣ ರೆಡ್ಡಿ, ಸೂರ್ಯ ಪ್ರಕಾಶ ರೆಡ್ಡಿ, ಗಜಿಗಿನಹಾಳ್ ನಾಗರಾಜ ಗೌಡ, ವಿವಿಧ ಗ್ರಾಮದ ಮುಖಂಡರು, ಊರಿನ ಹಿರಿಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post