ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ರಾಜ್ಯದ ಹಲವು ಕಡೆಗಳಲ್ಲಿ ಶ್ವಾನಗಳ ಹಾವಳಿ ಮಿತಿ ಮೀರಿದ್ದು, ಜಿಲ್ಲೆಯಲ್ಲಿ ನಾಯಿ ಕಡಿತಕ್ಕೆ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ.
ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನ.22ರಿಂದ 25ನೆಯ ತಾರೀಕಿನ ಒಳಗೆ ಇಬ್ಬರು ಮಕ್ಕಳು ನಾಯಿ ಕಡಿತಕ್ಕೆ ಬಲಿಯಾಗಿದ್ದು, ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಮಕ್ಕಳನ್ನು ಸುರಕ್ಷಿತಾ(3) ಹಾಗೂ ಶಾಂತಕುಮಾರ್(7) ಎಂದು ಗುರುತಿಸಲಾಗಿದೆ. ಈ ಮಕ್ಕಳು ತಮ್ಮ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ನಾಯಿಗಳ ಹಿಂಡು ದಾಳಿ ಮಾಡಿದ್ದು, ಗಾಯಗೊಂಡ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆ ಸ್ಥಳೀಯ ಪೋಷಕರಲ್ಲಿ ಆತಂಕ ಸೃಷ್ಠಿಸಿದ್ದು, ಮಕ್ಕಳನ್ನು ಮನೆಯ ಹೊರಗೆ ಆಟವಾಡಲು, ಒಬ್ಬರನ್ನೇ ಹೊರಕ್ಕೆ ಕಳುಹಿಸಲು ಹೆದರುತ್ತಿದ್ದಾರೆ.
Also read: ಕರ್ನಾಟಕ ವಿಶ್ವದ ಅತಿ ದೊಡ್ಡ ಕಬ್ಬಿಣ ಅದಿರು ಉತ್ಪಾದನೆ ಮಾಡುವ ರಾಜ್ಯವಾಗಲಿದೆ: ಸಿಎಂ
ಒಂದು ಪ್ರಕರಣದಲ್ಲಿ, ಮಗುವಿನ ಮೇಲೆ ದಾಳಿ ಮಾಡಿದ ನಾಯಿಗೆ ರೇಬಿಸ್ ಇತ್ತು ಎಂದು ತಿಳಿದುಬಂದಿದೆ. ಬಾದನಹಟ್ಟಿ ಗ್ರಾಮದಲ್ಲಿ ಬಹುತೇಕ ಪ್ರತಿ ಮನೆಯಲ್ಲೂ ಸಾಕು ನಾಯಿಗಳಿದ್ದು, ಕೆಲವೊಮ್ಮೆ ಮಾಲೀಕರೇ ಅವುಗಳನ್ನು ಸಾಕಲು ಸಾಧ್ಯವಾಗದೆ ಬೀದಿಗಳಿಗೆ ಬಿಡುತ್ತಿದ್ದಾರೆ. ಇಂತಹ ನಾಯಿಗಳೇ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ ಎಂದು ಹೇಳಲಾಗುತ್ತಿದೆ.
ಎರಡು ಘಟನೆಗಳ ಎಚ್ಚೆತ್ತುಕೊಂಡಿರುವ ಜಿ¯್ಲÁಡಳಿತ ಮಂಡಳಿಯು ಆರೋಗ್ಯಾಧಿಕಾರಿಗಳ ತಂಡವನ್ನು ನಿಯೋಜನೆಗೊಳಿಸಿದೆ ಎಂದು ವರದಿಯಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















