ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಹ್ಯಾಮರ್ ಥ್ರೊದಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್’ಗೆ #Khelo India University Games ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ #Shri Krishnadevaraya University ಸಚಿನ್ ಆಯ್ಕೆಯಾಗಿದ್ದಾರೆ.
ಒಡಿಶಾದ ಕಳಿಂಗ ವಿಶ್ವವಿದ್ಯಾಲಯದ ಹೂವಿನ ಹಡಗಲಿ ಜಿಬಿಆರ್ ಕಾಲೇಜಿನ ವಿದ್ಯಾರ್ಥಿ ಸಚಿನ್ ಅವರು, ಒಡಿಸ್ಸಾದ ಕಳಿಂಗ ವಿಶ್ವವಿದ್ಯಾಲಯ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ ಪಂದ್ಯಾವಳಿಯಲ್ಲಿ ಹ್ಯಾಮರ್ ಥ್ರೊದಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ 2025 ಕ್ಕೆ ಅರ್ಹತೆ ಪಡೆದಿದ್ದಾರೆ.
Also read: ಜಮೀನಿನ ಮಣ್ಣು ಎಷ್ಟು ವರ್ಷಕ್ಕೆ ಪರೀಕ್ಷಿಸಬೇಕು? ಡಾ.ನಿರಂಜನ್ ಹೇಳಿದ್ದೇನು?
ಸಚಿನ್ ಸಾಧನೆಗೆ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು(ಆಡಳಿತ), ಕುಲಸಚಿವರು ಮೌಲ್ಯಮಾಪನ, ಹಣಕಾಸು ಅಧಿಕಾರಿಗಳು, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಅಥ್ಲೆಟಿಕ್ಸ್ ತಂಡದ ವ್ಯವಸ್ಥಾಪಕರು ಮತ್ತು ತರಬೇತುದಾರರಾದ ಡಾ.ಶಶಿಧರ ಕೆಲ್ಲೂರ ಮತ್ತು ಬಡೇಸಾಬ ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post