ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೀಪಾವಳಿ ಹಬ್ಬದ #Deepavali Festival ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ #KSRTC ಬೆಂಗಳೂರಿನಿಂದ ರಾಜ್ಯದ ವಿವಿಧ ನಗರಗಳಿಗೆ ಸುಮಾರು 2500 ಹೆಚ್ಚುವರಿ ಬಸ್’ಗಳ ಸಂಚಾರವನ್ನು ಘೋಷಿಸಿದೆ.
ಅ.17ರ ನಾಳೆಯಿಂದ ಅ.20ರವರೆಗೂ ಹಾಗೂ ಅ.22ರಿಂದ 26ರವರೆಗೂ ಹಿಂತಿರುಗುವ ಪ್ರಯಾಣಕ್ಕಾಗಿ ವಿಶೇಷ ಬಸ್’ಗಳು ಸಂಚರಿಸಲಿವೆ.
ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಎಲ್ಲಿಲ್ಲಿಗೆ ಬಸ್?
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬಳ್ಳಾರಿ, ಹೈದರಾಬಾದ್, ತಿರುಪತಿ ಮತ್ತು ವಿಜಯವಾಡದಂತಹ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್ಸುಗಳ ಸಂಚಾರ ನಡೆಸಲಿದೆ.
ಮೈಸೂರು ರೋಡ್ ಸ್ಯಾಟಲೈಟ್ ನಿಲ್ದಾಣದಿಂದ ಎಲ್ಲೆಲ್ಲಿಗೆ?
ಮೈಸೂರು ರೋಡ್ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಮಡಿಕೇರಿ ಮತ್ತು ಕೊಡಗು ಪ್ರದೇಶದ ಇತರ ಪ್ರದೇಶಗಳಿಗೆ ಹೆಚ್ಚುವರಿ ಬಸ್ಸುಗಳ ಸಂಚಾರ ಇರಲಿದೆ.
ಶಾಂತಿನಗರ ಬಸ್ ನಿಲ್ದಾಣದಿಂದ ಎಲ್ಲೆಲ್ಲಿಗೆ?
ಟಿಟಿಎಂಸಿ ಚೆನ್ನೈ, ಕೊಯಮತ್ತೂರು, ಮಧುರೈ ಮತ್ತು ಎರ್ನಾಕುಲಂ ಸೇರಿದಂತೆ ತಮಿಳುನಾಡು ಮತ್ತು ಕೇರಳದ ಜನಪ್ರಿಯ ನಗರಗಳಿಗೆ ಬಸ್’ಗಳು ಸಂಚಾರ ಮಾಡಲಿವೆ.
ಈ ಎಲ್ಲಾ ಹೆಚ್ಚುವರಿ ಬಸ್ ಟ್ರಿಪ್’ಗಳು ಅ.17 ರಿಂದ 20 ರವರೆಗೆ ಇರಲಿದ್ದು, ಅ.22 ರಿಂದ 26 ರವರೆಗೆ ಹಿಂತಿರುಗುವ ಪ್ರಯಾಣವನ್ನು ನಿಗದಿಪಡಿಸಲಾಗಿದೆ.
ಪ್ರಯಾಣಿಕರು ಕೆಎಸ್’ಆರ್’ಟಿಸಿ ರಿಸರ್ವೇಷನ್ ಕೌಂಟರ್’ಗಳಲ್ಲಿ ಅಥವಾ ಇಲಾಖೆಯ ಅಧಿಕೃತ ವೆಬ್’ಸೈಟ್ ಮೂಲಕ ಆನ್’ಲೈನ್’ನಲ್ಲಿ ಟಿಕೆಟ್’ಗಳನ್ನು ಬುಕ್ ಮಾಡಬಹುದಾಗಿದೆ ಎಂದು ನಿಗಮ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post