ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ 25ನೇ ವರ್ಷದ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರದಾಸರ #Purandaradasaru ಮತ್ತು ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವ ದ ಅಂಗವಾಗಿ ನಗರದ ಬಸವನಗುಡಿಯ ಪುತ್ತಿಗೆ ಮಠದಲ್ಲಿ ಫೆ. 14 ರಿಂದ 16 ರವರೆಗೆ ವಿಶೇಷ ಶಾಸ್ತ್ರೀಯ ಸಂಗೀತ – ನೃತ್ಯ ಮತ್ತು ಗೋಷ್ಠಿ ಗಾಯನ, ಕೃತಿ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.
Also Read>> ಕರ್ನಾಟಕವು ದೇಶದ ಇಂಧನ ಭವಿಷ್ಯ: ಕೆ.ಜೆ. ಜಾರ್ಜ್
ಫೆ. 14ರ ಸಂಜೆ 5. 30ಕ್ಕೆ ಮಹೋತ್ಸವವನ್ನು ಓಂಕಾರ ಆಶ್ರಮದ ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಮಹಾವಿದ್ಯಾಲಯವು ಪ್ರಕಟಿಸಿದ “ಶ್ರೀ ಗುರು ಪೂರ್ಣಿಮಾರ್ಚನಂ” ವಿಶೇಷ ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ರಂಗದ ಖ್ಯಾತಗಾಯಕ ವಿದ್ವಾನ್ ಶೃಂಗೇರಿ ಎಚ್. ಎಸ್. ನಾಗರಾಜ್ ಆಗಮಿಸಲಿದ್ದಾರೆ. ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ “ಒಂದೇ ಮಾತರಂ “ಸಂಪೂರ್ಣ ಸಾಹಿತ್ಯದ ಸಾಮೂಹಿಕ ಗಾಯನ ಮೇಳೈಸಲಿದೆ.
ವಿಶೇಷ ಸನ್ಮಾನ
ವೀಣಾ ವಿದುಷಿ ರೇವತಿ ಕಾಮತ್ ಮತ್ತು ಇಂಜಿನಿಯರ್ ವಿ.ಕೆ. ಶೇಷಾದ್ರಿ ಅವರಿಗೆ ವಿಶೇಷ ಸನ್ಮಾನ ನೆರವೇರಲಿದೆ. ಸಂಜೆ 6. 30ಕ್ಕೆ ಗಾಯನ ಮತ್ತು ವೀಣಾ ವಾದನದಲ್ಲಿ ಮುತ್ತುಸ್ವಾಮಿ ದೀಕ್ಷಿತರ ನೊಟ್ಟು ಸ್ವರಗಳ ಪ್ರಸ್ತುತಿ ಇದೆ.
25 ವೀಣಾ ಕಲಾವಿದರಿಂದ ಝೇಂಕಾರ
ವಿದುಷಿಯರಾದ ದೀಪ್ತಿ ಪ್ರಸಾದ್ ಮತ್ತು ರಮಾ ಪ್ರಸನ್ನ ನೇತೃತ್ವದಲ್ಲಿ ಏಕಕಾಲದಲ್ಲಿ 25 ವೀಣಾ ಕಲಾವಿದರಿಂದ ವೀಣಾ ವಾದನ ಝೇಂಕಾರ ಕಲಾ ರಸಿಕರನ್ನು ರಂಜಿಸಲಿದೆ.
ನವರತ್ನ ಮಾಲಿಕೆ
ಫೆ. 15ರ ಬೆಳಗ್ಗೆ 10ಕ್ಕೆ ಶ್ರೀ ಪುರಂದರದಾಸರ ದೇವರ ನಾಮಗಳ ಗಾಯನವು ವಿದ್ಯಾರ್ಥಿಗಳಿಂದ ನೆರವೇರಲಿದೆ. ಮಧ್ಯಾಹ್ನ 12 ರಿಂದ ಶ್ರೀ ಪುರಂದರ ದಾಸರ ನವರತ್ನ ಮಾಲಿಕೆಯ ಗೋಷ್ಠಿ ಗಾಯನವಿದೆ. ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ನೇತೃತ್ವ ವಹಿಸಲಿದ್ದಾರೆ.
ದೇವರ ನಾಮ – ಭರತನಾಟ್ಯ
ಸಂಜೆ 5:30ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪುರಂದರ ದಾಸರ ದೇವರನಾಮಗಳ ಗೋಷ್ಠಿ ಗಾಯನ, ಸಂಜೆ 7:45 ಕ್ಕೆ ಶ್ರೀ ಲಕ್ಷ್ಮೀ ಯದುನಂದನ
ಅವರಿಂದ ಭರತನಾಟ್ಯ ಕಾರ್ಯಕ್ರಮ, ರಾತ್ರಿ 8:15ಕ್ಕೆ ವಿದುಷಿ ನಾಗಶ್ರೀ ಸಾತ್ವಿಕ್ ಶಿಷ್ಯ ವೃಂದದಿಂದ ಭರತನಾಟ್ಯ ಪ್ರಸ್ತುತಿ ರಂಜಿಸಲಿದೆ.
ಸಂಕೀರ್ತನೆ ಸೇವೆ
ಫೆ. 16ರ ಬೆಳಗ್ಗೆ 7:45 ಕ್ಕೆ ಪುತ್ತಿಗೆ ಮಠದ ಶ್ರೀ ಕೃಷ್ಣ ದೇವರಿಗೆ ಸಂಕೀರ್ತನೆ ಸೇವೆ ನೆರವೇರಲಿದೆ. 9ಕ್ಕೆ ಶಾಸ್ತ್ರೀಯ ಸಂಗೀತ, ಬೆಳಗ್ಗೆ 10ಕ್ಕೆ ಶ್ರೀ ತ್ಯಾಗರಾಜ ಸ್ವಾಮಿಗಳ ಪಂಚರತ್ನ ಕೃತಿಗಳ ಗೋಷ್ಠಿ ಗಾಯನವಿದೆ. ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ನೇತೃತ್ವದಲ್ಲಿ ಹಿರಿಯ ಗಾಯಕರು ಮತ್ತು ಕಲಾವಿದರು ಏಕಕಂಠದಲ್ಲಿ ಪಂಚರತ್ನ ಕೃತಿಗಳನ್ನು ಹಾಡಲಿದ್ದಾರೆ.
ಸಾಧಕರಿಗೆ ಸನ್ಮಾನ
ಬೆಳಗ್ಗೆ 11:30 ಕ್ಕೆ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಮತ್ತು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಡಾ. ಹರಿದಾಸ ಭಟ್ ಅಧ್ಯಕ್ಷತೆ ವಹಿಸಲಿದ್ದು, ರಾಘವೇಂದ್ರ ಗಣಪತಿ ಮತ್ತು ಟಿ.ಆರ್.ವಿ. ಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸ ಲಿದ್ದಾರೆ.ಇದೇ ಸಂದರ್ಭ ಭರತನಾಟ್ಯ ವಿದುಷಿ ರಂಜನಿ ಜಯಸಿಂಹ, ಖ್ಯಾತ ಜ್ಯೋತಿಷಿ, ಅಂಕಣಕಾರ ದ್ವಾರಕನಾಥ್ ಮತ್ತು ಪಿಟೀಲು ವಾದಕ ವಿದ್ವಾನ್ ಮೈಸೂರು ಸಂಜೀವ ಕುಮಾರ್ ಅವರಿಗೆ ಸನ್ಮಾನ ನೆರವೇರಲಿದೆ.
ಸಮಾರೋಪ
16ರ ಸಂಜೆ 5:30ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ದೇವರ ನಾಮಗಳ ಗೋಷ್ಠಿ, ನಂತರ ದೇವರ ನಾಮ ಉಚಿತ ಕಲಿಕಾ ಶಿಬಿರದ ಸಮಾರೋಪ ಸಂಪನ್ನಗೊಳ್ಳಲಿದೆ. ಇದೇ ಸಂದರ್ಭ ಶಿಬಿರಾರ್ಥಿಗಳು ಏಕಕಂಠದಲ್ಲಿ ದೇವರ ನಾಮಗಳ ಸಾಮೂಹಿಕ ಗಾಯನ ನೆರವೇರಿಸಲಿದ್ದಾರೆ.
ಖ್ಯಾತ ವಿದ್ವಾಂಸ ವಿದ್ವಾನ್ ಹರಿದಾಸ ಭಟ್ ದೇವರ ನಾಮಗಳಿಗೆ ವಿಶೇಷ ವ್ಯಾಖ್ಯಾನ ಮಾಡಲಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post