ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ 2020-21 ರಿಂದ 2022-23 ರವರೆಗೆ 7,06,290 ಮನೆ ನಿರ್ಮಾಣದ ಗುರಿ ಹೊಂದಿದ್ದು 68, 177 ಮನೆ ಪೂರ್ಣ ಗೊಳಿಸಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬುಧವಾರ ಬಿಜೆಪಿಯ ಡಿ . ಎಸ್. ಅರುಣ್ ಅವರ ಪ್ರೆಶ್ನೆಗೆ ಉತ್ತರಿಸಿದ ಅವರು, ಬಸವ ವಸತಿ , ಅಂಬೇಡ್ಕರ್ ನಿವಾಸ್ ನಗರ ಮತ್ತು ಗ್ರಾಮೀಣ, ದೇವರಾಜ ಅರಸು ನಗರ ಮತ್ತು ಗ್ರಾಮೀಣ, ಪ್ರಧಾನ ಮಂತ್ರಿ ಅವಾಸ್ ಗ್ರಾಮ, ವಾಜಪೇಯಿ ವಸತಿ ನಗರ ಯೋಜನೆಯಡಿಯಲ್ಲಿ 7.06, 290 ಮನೆಗಳ ನಿರ್ಮಾಣ ಗುರಿ ಪೈಕಿ 3,68,177 ಮನೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು 68,177 ಮನೆ ಪೂರ್ಣಗೊಂಡಿದೆ. 1.19,090 ಮನೆಗಳು ವಿವಿಧ ಹಂತದಲ್ಲಿವೆ. 1,77,868 ಮನೆ ಇನ್ನೂ ಪ್ರಾರಂಭಗೊಂಡಿಲ್ಲ. 3042 ಮನೆ ತಡೆ ಹಿಡಿಯಲಾಗಿದೆ ಎಂದು ಹೇಳಿದರು.
ಇದೇ ವೇಳೆ ಪಿ ಎಂ ಎ ವೈ ನಗರ ಮತ್ತು ಮುಖ್ಯಮಂತ್ರಿ ಯವರ ಒಂದು ಲಕ್ಷ ಮನೆ ಯೋಜನೆಯಲ್ಲಿ 1.05,267 ಮನೆ ನಿರ್ಮಾಣ ದ ಗುರಿ ಹೊಂದಿದ್ದು 99,218 ಮನೆ ನಿರ್ಮಾಣಕ್ಕೆ ಅನುಮೋದನೆ ದೊರೆತು 10,148 ಮನೆ ಪೂರ್ಣ ಗೊಂಡಿದ್ದು 60,277 ಮನೆ ನಿರ್ಮಾಣ ವಿವಿಧ ಹಂತದಲ್ಲಿದೆ, 28,793 ಮನೆಗಳ ಕಾಮಗಾರಿ ಇನ್ನೂ ಪ್ರಾರಂಭ ಆಗಿಲ್ಲ ಎಂದು ವಿವರಿಸಿದರು.
Also read: ಲೋಕಸಭಾ ಚುನಾವಣೆ-2024: ಹಾವೇರಿಯಿಂದ ಈಶ್ವರಪ್ಪ ಪುತ್ರ ಕಾಂತೇಶ್ ಅಖಾಡಕ್ಕೆ?
ವಸತಿ ಯೋಜನೆಗಳಿಗೆ ಒಟ್ಟಾರೆ 8,11,557 ಮನೆಗಳ ಪೈಕಿ 4,67,395 ಫಲಾನುಭವಿಗಳಿಗೆ ಕಾಮಗಾರಿ ಆದೇಶ ನೀಡಲಾಗಿದೆ. ಎ ಪೈಕಿ 78, 325 ಮನೆ ಗಳು ಪೂರ್ಣಗೊಂಡಿದ್ದು, 1,79,367 ಮನೆ ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ, 2,06,661 ಮನೆ ಪೂರ್ಣ ಗೊಳ್ಳಲು ಬಾಕಿ ಇದೆ. ಉಳಿದ 3,042 ಮನೆ ಫಲಾನುಭವಿಗಳು ಆಸಕ್ತಿ ತೋರದಿರುವುದು ಸೇರಿ ನಾನಾ ಕಾರಣಕ್ಕೆ ಬ್ಲಾಕ್ ಮಾಡಲಾಗಿದೆ ಎಂದು ತಿಳಿಸಿದರು.
ಎರಡೂ ಯೋಜನೆ ಗಳಿಗೆ 3,961,01 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post