ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಫ್ರಿಡ್ಜ್’ನಲ್ಲಿಟ್ಟಿದ್ದ ಊಟ ಹಾಗೂ ಕೇಕ್ ತಿಂದು 5 ವರ್ಷದ ಬಾಲಕ ಸಾವನ್ನಪ್ಪಿ, ಆತನ ಪೋಷಕರು ಅಸ್ವಸ್ಥಗೊಂಡಿರುವ ಘಟನೆ ಕೆಪಿ ಅಗ್ರಹಾರದ ಭುವನೇಶ್ವರಿ ನಗರದಲ್ಲಿ ನಡೆದಿದೆ.
ಮೃತ ಬಾಲಕನನ್ನು ಬಿ.ಧೀರಜ್(5) ಎಂದು ಗುರುತಿಸಲಾಗಿದ್ದು, ಅಸ್ವಸ್ಥಗೊಂಡಿರುವ ಆತನ ತಂದೆ ತಾಯಿ ಬಾಲರಾಜ್(42) ಹಾಗೂ ತಾಯಿ ನಾಗಲಕ್ಷ್ಮಿ(35) ಅವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Also read: ಜೋಗ ಜಲಪಾತಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ | ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಇವರ ಮನೆಯ ಫ್ರಿಡ್ಜ್’ನಲ್ಲಿ ಇರಿಸಲಾಗಿದ್ದ ಅನ್ನ, ಹಪ್ಪಳ ಹಾಗೂ ಕೇಕ್ ಸೇವನೆ ಮಾಡಿದ್ದಾರೆ. ಮೂವರಿಗೂ ಕೆಟ್ಟು ಹೋದ ಕೇಕ್ ತಿಂದ ಕೂಡಲೇ ವಾಂತಿ ಹಾಗೂ ಅತಿಸಾರದ ಲಕ್ಷಣಗಳು ಕಂಡು ಬಂದಿದೆ.
ಫ್ರಿಡ್ಜ್’ನಲ್ಲಿ ಇರಿಸಲಾಗಿದ್ದ ಆಹಾರಗಳು ವಿಷಯುಕ್ತವಾಗಿದ್ದು, ಅದನ್ನು ಸೇವನೆಯೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಅಸ್ವಸ್ಥಗೊಂಡಿರುವ ಬಾಲಕನ ಪೋಷಕರನ್ನು ವಿವಿ ಪುರಂನ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಬೆಳಿಗ್ಗೆ 9.30ರ ಸುಮಾರಿಗೆ ದೂರವಾಣಿ ಕರೆ ಬಂದಿತ್ತು. ಬಳಿಕ ಕೆಂಗೇರಿಯಲ್ಲಿದ್ದ ಮಗನ ಮನೆಗೆ ಹೋಗಿ, ಅಲ್ಲಿಂದ ಮೂವರನ್ನೂ ಆಸ್ಪತ್ರೆಗೆ ದಾಖಲಿಸಿದೆವು. ಆಸ್ಪತ್ರೆಯಲ್ಲಿ ಮಗ ಬಾಲರಾಜ್ ಮಧ್ಯಾಹ್ನ ಊಟಕ್ಕೆ ಮನೆಯ ಬಳಿಯ ಅಂಗಡಿಯಿಂದ ಹಪ್ಪಳ ಖರೀದಿಸಿರುವುದಾಗಿ ಹಾಗೂ ನಾನು ಮೂರು, ಹೆಂಡತಿ ಎರಡು ಹಾಗೂ ಪುತ್ರ ಧೀರಜ್ ಒಂದು ಹಪ್ಪಳ ಸೇವನೆ ಮಾಡಿರುವುದಾಗಿ ಹೇಳಿದ್ದ. ಹಪ್ಪಳ ತಿಂದ ಬಳಿಕ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಸಾಮಾನ್ಯ ಎಂದು ನಿರ್ಲಕ್ಷಿಸಿದ್ದೆವು. ಸಂಜೆ ಕೇಕ್ ತಿಂದ ಬಳಿಕ ಹೊಟ್ಟೆನೋವು ತೀವ್ರಗೊಂಡಿತ್ತು ಎಂದು ಬಾಲರಾಜ್ ಹೇಳಿದ ಎಂದು ಅವರ ತಾಯಿ ಚಾಮುಂಡೇಶ್ವರಿಯವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















