ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕನ್ನಡ ಚಿತ್ರರಂಗದ ಬೇಡಿಕೆಯ ನಟ ಯಶ್ ಅವರು ಹೊರ ರಾಜ್ಯಗಳಲ್ಲೂ ಜನರ ಪ್ರೀತಿ ಗಳಿಸಿದ್ದು, ಅವರಲ್ಲೊಬ್ಬ ವಿಶೇಷ ಅಭಿಮಾನಿ ತಮ್ಮ ನೆಚ್ಚಿನ ನಟನನ್ನು ನೋಡಲು ಬೆಂಗಳೂರಿಗೆ ಆಗಮಿಸಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಹೌದು… ಆಂಧ್ರಪ್ರದೇಶದ ರವಿಕುಮಾರ್ ಎನ್ನುವವರು ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಿಕೊಂಡು ಬೆಂಗಳೂರಿನ ಬನಶಂಕರಿ 3ನೇ ಹಂತದ ಹೊಸಕೇರಿ ಹಳ್ಳಿ ಬಳಿ ಇರುವ ಯಶ್ ಅವರ ಮನೆಗೆ ಬಂದಿದ್ದರು.
ಕೆಜಿಎಫ್ ಸಿನಿಮಾ ನೋಡಿದ ಮೇಲೆ ಯಶ್ ಅವರನ್ನು ಭೇಟಿಯಾಗಲೇಬೇಕು ಎನ್ನುವ ಹಂಬಲ ಮೂಡಿತು. ಆದ್ದರಿಂದ ಯಶ್ ಅವರನ್ನು ಭೇಟಿಯಾಗಿ ಅವರ ಕೆಜಿಎಫ್ ೨ ಸಿನಿಮಾಕ್ಕೆ ಶುಭಾಶಯ ಕೋರಲು, ತನ್ನ ದ್ವಿಚಕ್ರ ವಾಹನದ ಹಿಂಭಾಗದಲ್ಲಿ ಕೆಜಿಎಫ್ ಸಿನಿಮಾ ಚಿತ್ರದ ಕುರಿತು ಒಂದು ಭಾವುಟ ಕಟ್ಟಿದ್ದು ಇಂದು ಅವರನ್ನು ಭೇಟಿ ಯಾಗಲು ಬಂದಿದ್ದೇನೆ ಎಂದು ಹೇಳಿ ಭಾವುಕರಾದರು.
ಚಿತ್ರ – ಬರಹ : ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post