ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ, #Doctors Day ವೈಟ್ ಫೀಲ್ದ್ ಮೆಡಿಕವರ್ ಆಸ್ಪತ್ರೆಯಲ್ಲಿ #Medicover Hospital ವಿಜೃಂಭಣೆಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ವೈದ್ಯರ ಅಮೂಲ್ಯ ಸೇವೆಗಳಿಗೆ ಗೌರವ ಸೂಚಿಸಲಾಯಿತು. ಆಸ್ಪತ್ರೆಯ ಆಡಿಟೋರಿಯಂನಲ್ಲಿ ನಡೆದ ಈ ಸಂಭ್ರಮದಲ್ಲಿ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಒಳಗೊಂಡಿದ್ದವು.
ಆಸ್ಪತ್ರೆಯ ಎಲ್ಲಾ ವಿಭಾಗಗಳಿಂದ ವೈದ್ಯರು ಉತ್ಸಾಹದಿಂದ ಭಾಗವಹಿಸಿ ತಮ್ಮ ಶ್ರಮದ ನಡುವೆ ಸಂತಸದ ಕ್ಷಣಗಳನ್ನು ಅನುಭವಿಸಿದರು. ಈ ಕಾರ್ಯಕ್ರಮವು ವೈದ್ಯರ ಸೇವೆಗೆ ಕೃತಜ್ಞತೆ ಸೂಚಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು.
ಪ್ರತಿಯೊಂದು ವಿಭಾಗದ ಮುಖ್ಯಸ್ಥರು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ವೈದ್ಯರಿಗೆ ತಿಳಿಸಿದರು. ಆಸ್ಪತ್ರೆಯ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿಅವರು ವೈದ್ಯರ ಸೇವೆಯನ್ನು ಶ್ಲಾಘಿಸಿ, “ವೈದ್ಯರು ನಮ್ಮ ಆಸ್ಪತ್ರೆಯ ಮೂಲಸ್ತಂಭ. ಅವರ ನಿಷ್ಠೆ ಹಾಗೂ ಮಾನವೀಯತೆ ಇಡೀ ಸಿಬ್ಬಂದಿಗೆ ಪ್ರೇರಣೆಯಾಗುತ್ತದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಸಂಭ್ರಮ, ವೈದ್ಯರಿಗೆ ಸ್ಮರಣಿಕೆಗಳ ವಿತರಣೆ ಹಾಗೂ ಸಮೂಹ ಛಾಯಾಚಿತ್ರಗಳ ಮೂಲಕ ದಿನವನ್ನು ಇನ್ನಷ್ಟು ಸ್ಮರಣೀಯವನ್ನಾಗಿ ಮಾಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post