ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರು ಹೋಬಳಿ ಮೋಟಗಾನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾಟನಪಾಳ್ಯ ಗ್ರಾಮದಲ್ಲಿ ಗಾಂಧೀಜಿ ವೇಷಧರಿಸಿ ರಸ್ತೆಯಲ್ಲಿ ಪೈರು ನೆಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸುಮಾರು ವರ್ಷಗಳಿಂದ ಕಾಟನಪಾಳ್ಯ ರಸ್ತೆ ಅಭಿವೃದ್ಧಿ ಕಾಣದೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿತ್ತು ಸುಮಾರು ವರ್ಷಗಳಿಂದ ಇಲ್ಲಿನ ಗ್ರಾಮಸ್ಥರು ಮೋಟಗಾನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿ ರವರಿಗೆ ಮತ್ತು ಮಾಗಡಿ ಶಾಸಕ ಮಂಜುನಾಥ್ ರವರಿಗೆ ಸುಮಾರು ಬಾರಿ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ.
ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನ ಸವಾರರು ಹರಸಾಹಸ ಪಡುವಂತಹ ಸ್ಥಿತಿ ಒಂದು ಕಡೆಯಾದ್ರೆ ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹರ ಸಾಹಸ ಪಡುವ ಸ್ಥಿತಿ ಇವೆಲ್ಲವುಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ರು ಯಾವುದೇ ಕ್ರಮ ಕೈಗೊಳ್ಳದೆ ಜಾಣ ಕುರುಡುತನ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಗಾಂಧಿಜಿಯವರ ಗ್ರಾಮಗಳ ಅಭಿವೃದ್ಧಿ ಕನಸು ಅಧಿಕಾರಿಗಳು ನನಸು ಮಾಡುತ್ತಿಲ್ಲ ಈ ರಸ್ತೆಯಲ್ಲಿ ವೃದ್ಧರು ಮಕ್ಕಳು ಬಿದ್ದು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಅಧಿಕಾರಿಗಳು ಹಾಗೂ ಜನಪ್ರತಿನಿದಿನಗಳು ಈ ರಸ್ತೆಯ ಕಡೆ ಗಮನ ಹರಿಸದೆ ನಮಗೆ ಮೂಲ ಭೂತ ಸೌಕರ್ಯ ನೀಡದೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಕಾಟನಪಾಳ್ಯ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನೆಲ್ಲಾ ಗಮನಿಸಿದ ಚೇತನ್ ಎಂಬ ಪುಟ್ಟ ಯುವಕ ಮಹಾತ್ಮಾ ಗಾಂಧೀಜಿಯವರ ವೇಷ ಧರಿಸಿ ರಸ್ತೆಯಲ್ಲಿ ಪೈರು ನಾಟಿ ಮಾಡುವ ಮೂಲಕ ಗಾಂಧೀಜಿ ಕನಸು ಇನ್ನಾದ್ರೂ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ನನಸು ಮಾಡಿ ನಮ್ಮ ಗ್ರಾಮಕ್ಕೆ ರಸ್ತೆ ಸರಿಪಡಿಸಿ ಕೊಡಿ ಎಂದು ವಿನೂತನವಾಗಿ ಪ್ರತಿಭಟನೆ ನಡೆಸಿ, ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ಗಾಂಧೀಜಿಯವರ ತತ್ವ ಆದರ್ಶಗಳನ್ನು ಪಾಲಿಸಬೇಕು ಆಗಲೇ ಗಾಂಧೀಜಿಯವರ ಕನಸು ನನಸಾಗಲು ಸಾಧ್ಯ ಎಂದು ತಿಳಿಸಿದರು.
ಇನ್ನೂ ಈ ಯುವಕನ ಜೊತೆ ಗ್ರಾಮದ ಯುವಕರು ರಸ್ತೆಯಲ್ಲಿ ಪೈರು ನಾಟಿ ಮಾಡುವ ಮೂಲಕ ಗಾಂಧಿಜಿ ವೇಷ ಹಾಕಿ ಪ್ರತಿಭಟನೆ ಮಾಡುತಿದ್ದ ಯುವಕನಿಗೆ ಸಾತ್ ನೀಡಿದರು. ಇನ್ನಾದ್ರೂ ಈ ಕಾಟನಪಾಳ್ಯ ರಸ್ತೆ ಅಭಿವೃದ್ಧಿ ಮಾಡುವಲ್ಲಿ ಅಧಿಕಾರಿಗಳು ಮುಂದಾಗಿ ಗಾಂಧೀಜಿಯವರ ಗ್ರಾಮಗಳ ಅಭಿವೃದ್ಧಿ ಕನಸು ನನಸು ಮಾಡುತ್ತಾರ ಕಾದು ನೋಡಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post