ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತನ್ನ ಪ್ರೇಯಸಿಗಾಗಿ ಹೆತ್ತ ತಾಯಿಯ ಒಡವೆಗಳನ್ನೇ ಕದ್ದು, ಆ ಜಾಗದಲ್ಲಿ ರೋಲ್ಡ್ ಗೋಲ್ಡ್ ಒಡವೆಗಳನ್ನು ತಂದಿಟ್ಟಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಅಮೃತಹಳ್ಳಿಯ ದೀಪ್ತಿ ಎಂಬ ಯವತಿ ತನ್ನ ತಾಯಿಯ ಬಂಗಾರದ ಒಡೆವೆಗಳನ್ನು ಕದ್ದು ಪ್ರಿಯಕರ ಮದನ್ ಎಂಬಾತನಿಗೆ ನೀಡಿ, ಮೋಜು ಮಸ್ತಿ ಮಾಡಿದ್ದಳು. ತಾನು ಕದ್ದಿರುವುದು ತಾಯಿಗೆ ತಿಳಿಯಬಾರದು ಎಂದು ನಕಲಿ ಒಡವೆಗಳನ್ನು ತಂದಿಟ್ಟಿದ್ದಳು. ಇದನ್ನು ಗಮನಿಸಿದ ತಾಯಿ ಮಗಳ ಬಳಿ ವಿಚಾರಿಸಿದಾಗ ಆಕೆ ಉತ್ತರ ನೀಡಿಲ್ಲ. ಇದರಿಂದ ಬೇಸತ್ತ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದಲ್ಲಿ ದೀಪ್ತಿ ಹಾಗೂ ಮದನ್ ಅವರುಗಳನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ ನಂತರ ತಾವೇ ಕದ್ದಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಪ್ರಿಯಕರನೊಂದಿಗೆ ಮೋಜು ಮಸ್ತಿ ಮಾಡುವ ಸಲುವಾಗಿ ಒಡವೆ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
Also read: ಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ಅಧಿಕಾರ ಸ್ವೀಕಾರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post