ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರೀ ನಿರೀಕ್ಷೆ ಮೂಡಿಸಿದ್ದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ Dhruva Sarja ಅಭಿನಯದ ಮಾರ್ಟಿನ್ Martin ಟೀಸರ್ ಪ್ಯಾನ್ ಇಂಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದು, ಹಾಲಿವುಡ್ ಲೆವೆಲ್‌ನಲ್ಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಬಿಡುಗಡೆಯಾದ ಒಂದು ದಿನದ ನಂತರವೂ ಸಹ ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಕಾಯ್ದುಕೊಂಡಿರುವ ಮಾರ್ಟಿನ್ ಟೀಸರ್ ಕರ್ನಾಟಕ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ರಾಜ್ಯದಮಟ್ಟಿಗೆ ನೋಡುವುದಾದರೆ ಬಿಡುಗಡೆಯಾದ ಒಂದು ದಿನದ ನಂತರವೂ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ಇಂದು ಸಂಜೆಯ ವೇಳೆಗೆ ನಾಲ್ಕನೆಯ ಸ್ಥಾನದ ಟ್ರೆಂಡಿಂಗ್‌ನಲ್ಲಿದೆ.
ಅರ್ಜುನ್ ಸರ್ಜಾ ಕಥೆ ಬರೆದಿರುವ ಈ ಚಿತ್ರದ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ ಈ ಸಿನಿಮಾದಲ್ಲಿ ಮಾರ್ಟಿನ್ ಅಲ್ಲಾ ಅರ್ಜುನ್ ಎಂದು ಹೇಳುವ ಮೂಲಕ ಕುತೂಹಲವನ್ನು ಹುಟ್ಟುಹಾಕಿದ್ದಾರೆ.
Also read: ಭದ್ರಾವತಿ ಬಂದ್ ಹಿನ್ನೆಲೆ: ನಗರಸಭೆ ಉಪಾಧ್ಯಕ್ಷರ ಚುನಾವಣೆ ರದ್ದು
ಚಿತ್ರದಲ್ಲಿ ಧ್ರುವ ಸರ್ಜಾ ಮಾರ್ಟಿನ್ ಅಲ್ಲಾ ಎಂದಾದರೆ ಮಾರ್ಟಿನ್ ಯಾರು ಎಂಬ ಕುತೂಹಲ ಭರಿತ ಚರ್ಚೆ ಸಿನಿ ಪ್ರಿಯದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post