ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಏಪ್ರಿಲ್ 13ರಂದು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) #AKBMS ಅಧ್ಯಕ್ಷ ಸ್ಥಾನದ ಚುನಾವಣೆಗೆ ಪೂರ್ವಭಾವಿಯಾಗಿ ಗುರುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದ ಜಿಲ್ಲಾ ಪ್ರತಿನಿಧಿಗಳ ಆಯ್ಕೆಯಲ್ಲಿ ಖ್ಯಾತ ವಿದ್ವಾಂಸ ವೇ. ಮೂ. ಡಾ. ಭಾನುಪ್ರಕಾಶ್ ಶರ್ಮ #Bhanuprakash Sharma ಅವರ ಬೆಂಬಲಿಗರು ಹಲವು ಜಿಲ್ಲೆಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಮೂಲಕ ಪ್ರಚಾರದ ಮೊದಲ ಹಂತದಲ್ಲೇ ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಅವರು ಮೇಲುಗೈ ಸಾಧಿಸಿದ್ದಾರೆ.
ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಬೆಂಬಲದೊಂದಿಗೆ ಅಧ್ಯಕ್ಷ ಹುದ್ದೆಗೆ ಸ್ಪರ್ಧೆಗೆ ಇಳಿದಿರುವ ಭಾನುಪ್ರಕಾಶ್ ಶರ್ಮಾ ಬೆಂಬಲಿಗರಾದ ದುರ್ಗಾ ಪ್ರಸಾದ್ (ಕೊಡಗು), ಮಹೇಶ್ ಕಜೆ (ಮಂಗಳೂರು), ಡಾ.ಶ್ರೀನಾಥ್ (ಬಳ್ಳಾರಿ), ಕೆ.ದಿವಾಕರ್ (ವಿಜಯನಗರ), ಅಕ್ಷಯ ಕುಲಕರ್ಣಿ ( ಬೆಳಗಾವಿ), ಜೆ ಎಸ್ ಮಹಾಬಲ (ಚಿಕ್ಕಮಗಳೂರು), ಶ್ರೀನಿವಾಸ ಹುಯಿಲಗೋಳ ( ಗದಗ), ಹಾಗು ಉತ್ತರ ಕನ್ನಡದಲ್ಲಿ ಶ್ರೀಪಾದ ನಾರಾಯಣ ರಾಯಸದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಜೇತರನ್ನು ಅಭಿನಂದಿಸಿರುವ ಭಾನುಪ್ರಕಾಶ್ ಶರ್ಮ, ಸಮಾಜದ ಶ್ರೇಯಸಿಗೆ ಶ್ರಮಿಸುವಂತೆ ಅವರಿಗೆ ತಿಳಿಸಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ಚುನಾವಣೆ ಮೂಲಕ ಪ್ರತಿನಿಧಿಗಳ ಆಯ್ಕೆ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post