ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೈಲ್ವೆ ಸಚಿವಾಲಯದ ಅನುಮೋದನೆಯಂತೆ, ರೈಲು ಸಂಖ್ಯೆ 16597/98 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ #Bengaluru ಬೆಂಗಳೂರು – ಅಲಿಪುದ್ವಾರ ಜಂ. – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್’ಪ್ರೆಸ್ ಸೇವೆಯು ಎಸ್’ಎಂವಿಟಿ ಬೆಂಗಳೂರು ನಿಲ್ದಾಣದಿಂದ ಜನವರಿ 24ರಿಂದ ಮತ್ತು ಅಲಿಪುದ್ವಾರ ನಿಲ್ದಾಣದಿಂದ ಜನವರಿ 26ರಿಂದ ಆರಂಭಗೊಳ್ಳಲಿದೆ.
16597 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು – ಅಲಿಪುದ್ವಾರ ಜಂ. ಸಾಪ್ತಾಹಿಕ ಅಮೃತ್ ಭಾರತ್ ಎಕ್ಸ್’ಪ್ರೆಸ್ ಪ್ರತಿ ಶನಿವಾರ ಬೆಳಿಗ್ಗೆ 08.50 ಕ್ಕೆ ಎಸ್’ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಟು ಸೋಮವಾರ ಬೆಳಿಗ್ಗೆ 10:25ಕ್ಕೆ ಅಲಿಪುದ್ವಾರ ಜಂ. ತಲುಪುವುದು.
16598 ಸಂಖ್ಯೆಯ ಅಲಿಪುದ್ವಾರ ಜಂ. – ಎಸ್’ಎಂವಿಟಿ ಬೆಂಗಳೂರು ಸಾಪ್ತಾಹಿಕ ಅಮೃತ್ ಭಾರತ್ ಎಕ್ಸ್’ಪ್ರೆಸ್ ಪ್ರತಿ ಸೋಮವಾರ ರಾತ್ರಿ 10:25 ಕ್ಕೆ ಅಲಿಪುದ್ವಾರ ಜಂ. ನಿಂದ ಹೊರಟು ಗುರುವಾರ ಬೆಳಿಗ್ಗೆ 3 ಗಂಟೆಗೆ ಎಸ್’ಎಂವಿಟಿ ಬೆಂಗಳೂರು ನಿಲ್ದಾಣವನ್ನು ತಲುಪುವುದು.
ಎಲ್ಲೆಲ್ಲಿ ನಿಲುಗಡೆ?
ಮಾರ್ಗಮಧ್ಯೆ ಈ ರೈಲುಗಳಿಗೆ ಎರಡೂ ದಿಕ್ಕುಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್, ಕುಪ್ಪಂ, ಜೋಲಾರ್ಪೇಟೈ ಜಂಕ್ಷನ್, ಕಾಟ್ಪಾಡಿ, ರೇಣಿಗುಂಟಾ, ನೆಲ್ಲೂರು, ಓಂಗೋಲ್, ಚಿರಾಲ, ತೆನಾಲಿ ಜಂಕ್ಷನ್, ವಿಜಯವಾಡ ಜಂಕ್ಷನ್, ಏಲೂರು, ರಾಜಮಂಡ್ರಿ, ಸಮಲ್ಕೋಟ್, ಅನಕಪಲ್ಲಿ, ದುವ್ವಾಡ, ಸಿಂಹಾಚಲಂ ಉತ್ತರ, ಪೆಂಡುರ್ತಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಲಂ ರೋಡ್, ಪಲಾಸ, ಬ್ರಹ್ಮಪುರ, ಬಾಲುಗಾಂವ್, ಖುರ್ದಾ ರೋಡ್, ಭುವನೇಶ್ವರ್, ಕಟಕ್, ಜಾಜ್ಪುರ್ ಕಿಯೋಂಜರ್ ರೋಡ್, ಭದ್ರಕ್, ಬಾಲಸೋರ್, ಖರಗ್ಪುರ್ ಜಂ., ಆಂದುಲ್, ದಾಂಕುಣಿ, ಬರ್ಧಮಾನ್, ಬೋಲ್ ಪುರ್ ಶಾಂತಿನಿಕೇತನ, ರಾಮ್ ಪುರ್ ಹಟ್, ಮಾಲ್ಡಾ ಟೌನ್, ಬಾರ್ಸೋಯಿ ಜಂಕ್ಷನ್, ಕಿಶನ್ ಗಂಜ್, ಆಲುಆಬಾರಿ ರೋಡ್, ನ್ಯೂ ಜಲೈಗುರಿ, ಸಿಲಿಗುರಿ ಜಂಕ್ಷನ್, ಬಿನ್ನಾಗುರಿ ಮತ್ತು ಹಾಸಿಮಾರ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.
ಈ ರೈಲಿನಲ್ಲಿ 8 ಸ್ಲೀಪರ್ ಕೋಚ್’ಗಳು, 11 ದ್ವಿತೀಯ ದರ್ಜೆ ಕೋಚ್’ಗಳು, 02 ಎಸ್’ಎಲ್’ಆರ್’ಡಿ ಮತ್ತು ಒಂದು ಪ್ಯಾಂಟ್ರಿ ಕಾರ್ ಸೇರಿದಂತೆ ಒಟ್ಟು 22 ಬೋಗಿಗಳು ಇರುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















