ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಎಲ್ಲ ವಿವಿಗಳು ಮುಂದಿನ ಮಾರ್ಚ್ ಒಳಗಾಗಿ ಕನಿಷ್ಠ ಯಾವುದಾದರೂ ಒಂದು ಕೋರ್ಸನ್ನು ಸಂಪೂರ್ಣ ಆನ್’ಲೈನ್ ಮೂಲಕ ಜಾರಿಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ Minister Ashwathnarayana ಹೇಳಿದ್ದಾರೆ.
ಡಿಸೆಂಬರ್ ಪೂರ್ತಿ ನಡೆಯುವ ‘ಸುಶಾಸನ ಮಾಸಾಚರಣೆ’ಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. ಸುಶಾಸನ ಬರಬೇಕೆಂದರೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ಹೀಗಾಗಿ #NEP2020 ಅನುಷ್ಠಾನದ ಮೂಲಕ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರಲಾಗುತ್ತಿದೆ.

ಉದ್ಯೋಗಾಕಾಂಕ್ಷಿಗಳು-ಉದ್ಯೋಗದಾತರನ್ನು ಬೆಸೆಯುವ ಸ್ಕಿಲ್ ಕನೆಕ್ಟ್ ಪೋರ್ಟಲ್ ಉದ್ಘಾಟನೆ, ಐದು ಸಂಸ್ಥೆಗಳೊಂದಿಗೆ ಉದ್ಯೋಗ ಸೃಷ್ಟಿಯ ಒಡಂಬಡಿಕೆ ಮತ್ತು ನನ್ನ ವ್ಯಾಪ್ತಿಯ 3 ಇಲಾಖೆಗಳ ಸುಧಾರಣೆ ಕುರಿತ ಸಂಕಲ್ಪ ಪತ್ರಗಳ ಬಿಡುಗಡೆ ಕಾರ್ಯಕ್ರಮ ಜರುಗಿತು.

ಇನ್ನು, ಇದರಡಿ ಇಂಗ್ಲಿಷ್ ಕಲಿಕೆ ಲ್ಯಾಬ್ ಸ್ಥಾಪನೆ, ಜಪಾನ್ನಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಜಪಾನಿ ಭಾಷಾ ಕಲಿಕಾ ವ್ಯವಸ್ಥೆ, ಲೋಕೋಸ್ ತಂತ್ರಾಂಶದ ಮೂಲಕ ಸ್ವಸಹಾಯ ಸಂಘಗಳ ಮಾಹಿತಿ, ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ತರಲಾಗುವುದು. ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಮಿಗಿಲಾಗಿ 13,500 ಮಹಿಳಾ ಉದ್ಯಮಿಗಳಿಗೆ ಸಿ-ಡಾಕ್ ಮೂಲಕ ಪ್ರೇರಣಾ ಶಿಬಿರಗಳನ್ನು ಆಯೋಜಿಸಲಾಗುವುದು. ಒಟ್ಟಿನಲ್ಲಿ 10 ಸಾವಿರ ಜನರಿಗೆ ಏಕಕಾಲದಲ್ಲಿ ನೇಮಕಾತಿ ಪತ್ರಗಳನ್ನು ನೀಡಲಾಗುವುದು ಎಂದರು.












Discussion about this post