ಕಲ್ಪ ಮೀಡಿಯಾ ಹೌಸ್
ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪ ಎದುರಿಸುತ್ತಿದ್ದ ನಟ ಅರ್ಜುನ್ ಸರ್ಜಾ ಅವರಿಗೆ ಪ್ರಸ್ತುತ ಪ್ರಕರಣದಿಂದ ಕ್ಲೀನ್ ಚೀಟ್ ದೊರೆತಿದೆ.
ಹೌದು… ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣವನ್ನು ಕಬ್ಬನ್‌ಪಾರ್ಕ್ ಪೊಲೀಸರು ಕೈ ಬಿಟ್ಟಿದ್ದು, ಅರ್ಜುನ್ ಸರ್ಜಾ ಅವರು ಪ್ರಕರಣ ಮುಕ್ತರಾಗಿದ್ದಾರೆ.
ಘಟನೆ ವಿವರ:
ಮೀ ಟೂ ಅಭಿಯಾನದ ಸಂದರ್ಭ 2018ರಲ್ಲಿ ನಟಿ ಶ್ರುತಿ ಹರಿಹರನ್, ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆದರೆ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪ ಹೊರಿಸಲಾದಾಗ ಅವರ ಕುಟುಂಬದವರಾದ ಧ್ರುವ ಸರ್ಜಾ, ಆಗ ಬದುಕಿದ್ದ ಚಿರಂಜೀವಿ ಸರ್ಜಾ, ಮೇಘನಾ ರಾಜ್, ಅರ್ಜುನ್ ಸರ್ಜಾ ಮಾವ ಹಿರಿಯ ನಟ ರಾಜೇಶ್, ಕುಟುಂಬದ ಆಪ್ತ ಪ್ರಶಾಂತ್ ಸಂಬರ್ಗಿ ಇನ್ನೂ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್ ದೊರೆತಿದ್ದು, ಈ ಬಗ್ಗೆ ಧ್ರುವ ಸರ್ಜಾ, ಮೇಘನಾ ರಾಜ್ ಅವರುಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರಲ್ಲಿಯೂ ಧ್ರುವ ಸರ್ಜಾ ಪರೋಕ್ಷವಾಗಿ ಶ್ರುತಿ ಹರಿಹರನ್ ಹಾಗೂ ಅವರನ್ನು ಬೆಂಬಲಿಸಿದವರನ್ನು ವ್ಯಂಗ್ಯವಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಪ್ರಕಟಿಸಿರುವ ಧ್ರುವ ಸರ್ಜಾ, ಸೊಳ್ಳೆ ಬ್ಯಾಟ್‌ನಿಂದ ಸೊಳ್ಳೆಗಳನ್ನು ಹೊಡೆಯುತ್ತಿರುವ ವಿಡಿಯೋ ಪ್ರಕಟಿಸಿ, ‘ಸೊಳ್ಳೆ ಕ್ರಿಮಿ ಕೀಟ’ ಎಂದು ಬರೆದಿದ್ದಾರೆ. ಅದರ ಜೊತೆಗೆ ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಸಹ ಬರೆದುಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post