ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೇಣುಕಾಸ್ವಾಮಿ ಹತ್ಯೆ ಪ್ರಕರಣ #Renukaswamy Murder Case ಆರೋಪದ ಮೇರೆಗೆ ಜೈಲಿನಲ್ಲಿರುವ ನಟ ದರ್ಶನ್‌ಗೆ #Darshan ಆರೋಗ್ಯ ಸಮಸ್ಯೆ ಎದುರಾಗಿದ್ದು, ಚಿಕಿತ್ಸೆ ಪಡೆಯಲು ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ವರದಿ ಆಗಿದೆ.
ಕಳೆದ ಒಂದು ವಾರದಿಂದ ಬೆನ್ನು ನೋವು ಹೆಚ್ಚಾಗಿದ್ದು, ಕುಂಟುತ್ತಲೇ ನಡೆಯುತ್ತಿರುವ ಹಿನ್ನೆಲೆ ಚಿಕಿತ್ಸೆ ಕೊಡಿಸಿ ಎಂಬ ದರ್ಶನ್ ಮನವಿ ಮೇರೆಗೆ ಸಿವಿ ರಾಮನ್ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಜೈಲಧಿಕಾರಿಗಳು ಪತ್ರ ಬರೆದಿದ್ದರು. ತಪಾಸಣೆ ವೇಳೆ ಫಿಜಿಯೋಥೆರಫಿ ಅವಶ್ಯಕತೆ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. ಸದ್ಯ ವಾರಕ್ಕೆ ಎರಡು ಬಾರಿ ಮಾತ್ರ ಫಿಸಿಯೋ ಥೆರಪಿ ಮಾಡಲು ವೈದ್ಯರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆನ್ನುನೋವಿನ ಜೊತೆಗೆ ದರ್ಶನ್ ಮೊಣಕೈ ನೋವು ಎಂದು ದೂರಿದ್ದಾರೆ. ಅವರಿಗೆ ಕಾರು ಅಪಘಾತ ಆದಾಗ ಮೊಣಕೈಗೆ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆ ಆಗಿತ್ತು. ಈ ವೇಳೆ ಕೈಗೆ ರಾಡ್ ಹಾಕಲಾಗಿದೆ. ಈಗ ನೋವು ಹೆಚ್ಚಿದ್ದು, ಎರಡು ಬೆರಳು ಮರಗಟ್ಟಿದೆ ಎನ್ನಲಾಗುತ್ತಿದೆ. ಈಗ ಅವರು ನೆಲದ ಮೇಲೆ ಮಲಗುತ್ತಿದ್ದು, ಶೀತಾಂಶಕ್ಕೆ ಬೆನ್ನು ನೋವು ಮತ್ತೆ ಜಾಸ್ತಿಯಾಗಿದೆ. ಹೀಗಾಗಿ ಮೊಣಕೈ ನೋವಿಗೂ ಚಿಕಿತ್ಸೆ ನೀಡಲು ಚಿಂತಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post