ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಧಮ್ಮು, ತಾಕತ್ತು ಇದ್ದರೆ ಆರ್’ಎಸ್’ಎಸ್ ಮುಟ್ಟಿ ನೋಡಲಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ RAshok ಸವಾಲು ಹಾಕಿದರು.
ಸರ್ಕಾರದ ಇಲಾಖೆಗಳು ಬಿಜೆಪಿ ಅವಧಿಯಲ್ಲಿ ಆರ್’ಎಸ್’ಎಸ್ ಶಾಖೆಗಳಾಗಿದ್ದವು. ಈಗ ಅವುಗಳನ್ನು ಕ್ಲೀನ್ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಅವರು ಕಿಡಿ ಕಾರಿದರು.
ಅವರಿಗೆ ಧಮ್ಮು ತಾಕತ್ತು ಇದ್ದರೆ ಮುಟ್ಟಿ ನೋಡಲಿ. ಅಂತಹ ಇಂದಿರಾಗಾAಧಿ ಅವರ ಕೈನಲ್ಲಿ ಏನು ಮಾಡಲು ಆಗಲಿಲ್ಲ. ನಿರ್ಬಂಧ ಹೇರಿ ಹಿಂದೆ ಪಡೆದರು. ಆರ್’ಎಸ್’ಎಸ್ ವಿಷಯಕ್ಕೆ ಬಂದವರೆಲ್ಲಾ ಸರ್ವನಾಶ ಆಗಿದ್ದಾರೆ. ಇವರಿಗೂ ಅದೇ ಗತಿ ಕಾದಿದೆ ಎಂದರು.
Also read: ಕಬ್ಬಿಣದ ಸ್ಲೈಡಿಂಗ್ ಗೇಟ್ ಬಿದ್ದು 3 ವರ್ಷದ ಬಾಲಕ ದುರ್ಮರಣ
ಅಪ್ರತಿಮ ದೇಶಪ್ರೇಮಿ ಸಾವರ್ಕರ್ ಭಾವಚಿತ್ರ ತೆಗೆದು ಹಾಕಿರುವುದು ಸರಿಯಲ್ಲ. ಅವರು ಹಿಂದೂ ಮಹಾಸಭಾ ಅಧ್ಯಕ್ಷರಾಗಿದ್ದರು ಎಂಬುದೇ ಕಾಂಗ್ರೆಸ್ಸಿಗರ ಹೊಟ್ಟೆಕಿಚ್ಚಿಗೆ ಕಾರಣ. ಬೇಕಿದ್ದರೆ ಮತ್ತೊಂದು ನೆಹರು ಭಾವಚಿತ್ರ ಹಾಕಿಕೊಳ್ಳಲಿ, ಸಾವರ್ಕರ್ ಚಿತ್ರ ತೆಗೆಯಬಾರದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿದ್ದು ಹಿಂದೂ ವಿರೋಧಿ
ಮುಖ್ಯಮಂತ್ರಿ ಸಿದ್ದರಾಮಯ್ಯ CMSiddaramaiah ಅವರು ಹಿಂದಿನಿAದಲೂ ಹಿಂದೂಗಳನ್ನು ವಿರೋಧಿಸಿಕೊಂಡೇ ಬಂದಿದ್ದಾರೆ. ದಸರಾ ಕುಸ್ತಿ ವೇಳೆ ಕೇಸರಿ ಪೇಠ ಕಿತ್ತಸೆದರು. ಈಗ ಅವರ ಸಂಪುಟ ಸಹೋದ್ಯೋಗಿ ಜಮೀರ್ ಸ್ಪೀಕರ್ ಪೀಠಕ್ಕೆ ಧರ್ಮವನ್ನು ತಂದು ನೀಚ ರಾಜಕಾರಣ ಮಾಡುತ್ತಿದ್ದಾರೆ. ಇವೆಲ್ಲವನ್ನೂ ರಾಜ್ಯದ ಜನತೆ ಗಮನಿಸುತ್ತಾರೆ. ನಮ್ಮ ಪಕ್ಷ ವಿಧಾನಮಂಡಲದ ಒಳಗೆ ಮತ್ತು ಹೊರಗೆ ಈ ಎಲ್ಲಾ ವಿಷಯಗಳ ವಿರುದ್ಧ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post