ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ನಗರದ ಜಾರಕಬಂಡೆ ಕಾವಲ್ ಶ್ರೀಗಂಧದ ಮೀಸಲು ಅರಣ್ಯದ ಸರ್ವೆ ನಂ. 18 ಮತ್ತು 19ರಲ್ಲಿ 15 ಎಕರೆ ಅರಣ್ಯ ಭೂಮಿಯನ್ನು Forest Land Encroachment ಇಂದು ಮರು ವಶಕ್ಕೆ ಪಡೆಯಲಾಗಿದೆ.
2017ರಲ್ಲೇ ಸದರಿ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ತೀರ್ಪು ನೀಡಲಾಗಿತ್ತು. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಬೆಂಗಳೂರು ಸುತ್ತಮುತ್ತ ಬೆಲೆಬಾಳುವ ಅರಣ್ಯ ಭೂಮಿಯ ಒತ್ತುವರಿ ತೆರವು ಮಾಡಿಸಬೇಕು ಎಂದು ನಿರ್ದೇಶನ ಕೊಟ್ಟ ತರುವಾಯ ನಡೆದ ಎರಡನೆಯ ಒತ್ತುವರಿ ತೆರವು ಕಾರ್ಯಾಚರಣೆ ಇದಾಗಿದೆ.

Also read: ಖ್ಯಾತ ನಟ ಹಾಗೂ ಕುಟುಂಬಸ್ಥರಿದ್ದ ವಿಮಾನ ಸಮುದ್ರದಲ್ಲಿ ಪಥನ | ನಾಲ್ವರ ಸಾವು
ಅರಣ್ಯ ಭೂಮಿಯನ್ನು ಯಾವುದೇ ವ್ಯಕ್ತಿಗೆ, ಸಂಸ್ಥೆಗೆ ಮಂಜೂರು ಮಾಡಲು ಬರುವುದಿಲ್ಲ ಎಂಬ ಅರಣ್ಯ ಇಲಾಖೆಯ ವಾದಕ್ಕೆ ಮನ್ನಣೆ ನೀಡಿ ಕರ್ನಾಟಕ ಸರ್ಕಾರದ ದಿ.9.10.2017ರ ಆದೇಶ ಸಂಖ್ಯೆ ಆರ್’ಡಿ. 228 ಎಲ್.ಜಿ.ಬಿ. 2017ರನ್ವಯ 444 ಎಕರೆ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಆದೇಶ ನೀಡಿದ್ದು, ಇಂದು ಬೆಂಗಳೂರು ಡಿಸಿಎಫ್ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ 15 ಎಕರೆ ಜಮೀನಿನ ಗೇಟಿಗೆ ಬೀಗ ಹಾಕಿ, ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಯಿತು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post