ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಧಾನಸಭಾ ಚುನಾವಣೆಗೆ ಟಿಕೇಟ್ ಸಿಗದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ Lakshman Savadi ಬಿಜೆಪಿ ತೊರೆದ ಬೆನ್ನಲ್ಲೇ, ಎಂಎಲ್’ಸಿ, ರಾಣೆಬೆನ್ನೂರಿನ ಆರ್. ಶಂಕರ್ ಸಹ ಕಮಲ ಪಕ್ಷಕ್ಕೆ ಶಾಕ್ ನೀಡಲು ಸಿದ್ದರಾಗಿದ್ದಾರೆ.
ಈ ಕುರಿತಂತೆ ವರದಿಯಾಗಿದ್ದು, ಬಿಜೆಪಿ ನನ್ನನ್ನು ನಡು ನೀರಿನಲ್ಲಿ ಕೈಬಿಟ್ಟಿದೆ. ಸರ್ಕಾರ ಬರುವುದಕ್ಕೆ ನಾನು ಸಹಾಯ ಮಾಡಿದ್ದೇನೆ. ಯಡಿಯೂರಪ್ಪ ಟಿಕೇಟ್ ಕೊಡಿಸುತ್ತಾರೆ ಎಂಬ ಭರವಸೆಯಿತ್ತು. ನನ್ನ ಸಹಾಯವನ್ನು ಮರೆತಿದ್ದಾರೆ. ನನಗೆ ದ್ರೋಹವಾಗಿದ್ದು, ನಾನು ಟಿಕೇಟ್’ಗಾಗಿ ಇವರ ಬಳಿ ಭಿಕ್ಷೆ ಬೇಡಬೇಕಾ ಎಂದು ಕಿಡಿ ಕಾರಿದ್ದಾರೆ.
ಟಿಕೇಟ್ ಸಿಗದಿದ್ದರೂ ಸಹ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಸಿದ್ದ. ಇಂದು ಮಧ್ಯಾಹ್ನ ಎಂಎಲ್’ಸಿ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದಿದ್ದಾರೆ.
Also read: ಈಶ್ವರಪ್ಪ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಆಯನೂರು ಮಂಜುನಾಥ್ ಹೇಳಿದ್ದೇನು?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post