ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೋಕಸಭಾ ಚುನಾವಣೆ ಸನಿಹವಾಗುತ್ತಿರುವಂತೆಯೇ ರಾಜ್ಯ ಬಿಜೆಪಿ BJP ವಕ್ತಾರರನ್ನಾಗಿ ಹಲವರನ್ನು ನೇಮಕ ಮಾಡಲಾಗಿದೆ.
ಈ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶ ಹೊರಡಿಸಿದ್ದು, ಮುಖ್ಯ ವಕ್ತಾರರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ್, ವಕ್ತಾರರಾಗಿ ಹರಿಪ್ರಕಾಶ್ ಕೋಣೆಮನೆ, ಛಲವಾದಿ ನಾರಾಯಣ ಸ್ವಾಮಿ, ಡಾ.ತೇಜಸ್ವಿನಿ ಗೌಡ, ಕೆ.ಎಸ್. ನವೀನ್, ಎಂ.ಜಿ. ಮಹೇಶ್, ಎಚ್.ಎನ್. ಚಂದ್ರಶೇಖರ್, ಡಾ.ನರೇಂದ್ರ ರಂಗಪ್ಪ, ಸುರಭಿ ಹೊದಿಗೆರೆ, ಅಶೋಕ್ ಕೆ.ಎಂ. ಗೌಡ, ಎಚ್. ವೆಂಕಟೇಶ್ ದೊಡ್ಡೇರಿ ಅವರನ್ನು ನಿಯೋಜಿಸಲಾಗಿದೆ.
ಇದರೊಂದಿಗೆ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕರನ್ನಾಗಿ ಪ್ರಶಾಂತ್ ಮಾಕನೂರು, ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ, ಮಾಹಿತಿ ತಂತ್ರಜ್ಞಾನ ವಿಭಾಗ(ಐಟಿ) ಸಂಚಾಲಕರನ್ನಾಗಿ ನಿತಿನ್ ರಾಜ್ ನಾಯಕ್, ಸಹ ಸಂಚಾಲಕರನ್ನಾಗಿ ಶ್ಯಾಮಲಾ ರಘುನಂದನ್, ಮಾಧ್ಯಮ ವಿಭಾಗ(ಐಟಿ) ಸಂಚಾಲಕರನ್ನಾಗಿ ಕರುಣಾಕರ ಖಾಸಲೆ, ಸಹ ಸಂಚಾಲಕರನ್ನಾಗಿ ಪ್ರಶಾಂತ್ ಕೆಡಂಜಿ ಅವರನ್ನು ನಿಯೋಜಿಸಲಾಗಿದೆ.
Also read: DCM’s Public Grievance Redressal Event Draws Huge Crowds
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post