ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಪ್ಪು ಗುಣಕ್ಕೆ ನಿನ್ನೆ ಬಿಡುಗಡೆಯಾಗಿರುವ ಗಂಧದ ಗುಡಿ ಹಾಗೂ ಅವನು ಏನು ಸಂಪಾದನೆ ಮಾಡಿದ್ದಾನೆ ಎಂಬುದಕ್ಕೆ ನೆರೆದಿರುವ ಅಭಿಮಾನಿಗಳೇ ಸಾಕ್ಷಿ ಎಂದು ರಾಘವೇಂದ್ರ ರಾಜಕುಮಾರ್ Raghavendra Rajkumar ಭಾವುಕರಾಗಿ ನುಡಿದಿದ್ದಾರೆ.
ಪುನೀತ್ ಪ್ರಥಮ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಅವರ ಮಾತನಾಡಿದರು.
ಅಪ್ಪು ಹೋಗಿ ಒಂದು ವರ್ಷ ಜನರ ಅಭಿಮಾನವೇ ನಮ್ಮನ್ನು ಇಂದಿನವರೆಗೂ ಕರೆದುಕೊಂಡು ಬಂದಿದೆ. ಇಂದಿಗೆ ಒಂದು ವರ್ಷದ ಹಿಂದಿನ ಘಟನೆಗಳು ನಮ್ಮನ್ನು ಕಾಡುತ್ತಿವೆ. ಅಪ್ಪು ಗುಣ ಎಂತಹುದ್ದು ಎಂಬುದಕ್ಕೆ ಅವನು ಮಾಡಿರುವ ಗಂಧದ ಗುಡಿ ಚಿತ್ರವೇ ಸಾಕ್ಷಿಯಾಗಿದೆ. ಮಾತ್ರವಲ್ಲದೇ ಅವನು ಏನು ಸಂಪಾದನೆ ಮಾಡಿ, ನಮಗೆ ಕಲಿಸಿ ಹೋಗಿದ್ದಾನೆ ಎಂಬುದಕ್ಕೆ ಆಗಮಿಸುತ್ತಿರುವ ಅಭಿಮಾನಿಗಳೇ ಸಾಕ್ಷಿಯಾಗಿದೆ ಎಂದರು.
ಎಲ್ಲವೂ ಮೊದಲೇ ಬರೆದಿತ್ತು ಎನಿಸುತ್ತದೆ. ಅವನ ಒಳ್ಳೆಯ ಗುಣಕ್ಕೆ ತಕ್ಕಂತೆಯೇ ಬದುಕಿ, ಸಂದೇಶ ನೀಡಿದ್ದಾನೆ. ಅವನು ನೀಡಿ ಹೋಗಿರುವ ಗಂಧದ ಗುಡಿ ಚಿತ್ರ ನೋಡುತ್ತಿದ್ದರೆ ನಾವೇ ಕಾಡಿನ ಟೂರಿಗೆ ಹೋದಂತೆ ಆಗುತ್ತದೆ ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















