ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶೇಷಾದ್ರಿಪುರದ ಫ್ಲಾಟ್ ಫಾರ್ಮ್ ರಸ್ತೆಯಲ್ಲಿರುವ (ಮಂತ್ರಿ ಮಾಲ್ ಮೆಟ್ರೋ ಸ್ಟೇಷನ್ ಎದುರು) ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವಾರ್ಷಿಕೋತ್ಸವದ ಅಂಗವಾಗಿ ಜುಲೈ 15, ಮಂಗಳವಾರ ಸಂಜೆ 6-30ಕ್ಕೆ ಕು. ದಿವ್ಯಶ್ರೀ ರಂಗನಾಥನ್ ರವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಹವಾದ್ಯ : ಶ್ರೀ ಅಭಯ್ (ಪಿಟೀಲು), ಶ್ರೀ ಕಾರ್ತೀಕ್ ಪ್ರಣವ್ (ಮೃದಂಗ) ಸಾಥ್ ನೀಡಲಿದ್ದಾರೆ.
ಭರತನಾಟ್ಯ ಪ್ರದರ್ಶನ
ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಜುಲೈ 17, ಗುರುವಾರ ಸಂಜೆ 5-15ಕ್ಕೆ ವಿದುಷಿ ಶ್ರೀಮತಿ ಸಮನಾ ಆಚಾರ್ ಅವರ ನಿರ್ದೇಶನದಲ್ಲಿ ನಾಟ್ಯ ವೇದ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ” ಕಾರ್ಯಕ್ರಮ ಏರ್ಪಡಿಸಿದೆ ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post