ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿಯರಾದ ಮಧುಮಿತಾ ಮತ್ತು ಸುಷ್ಮಿತಾ (ಸ್ಮಿತಾ ಸಹೋದರಿಯರು) ನಡೆಸಿಕೊಟ್ಟ “ಕರ್ನಾಟಕ ಶಾಸ್ತ್ರೀಯ ಸಂಗೀತ” ಗಾಯನ ಬಹಳ ಆಕರ್ಷಕವಾಗಿತ್ತು.
ವಿದ್ವಾನ್ ಅರುಣಾಚಲ ಕಾರ್ತೀಕ್ (ಪಿಟೀಲು), ವಿದ್ವಾನ್ ಅಶ್ವತ್ಥ ನಾರಾಯಣರಾವ್ (ಮೃದಂಗ) ಮತ್ತು ವಿದ್ವಾನ್ ಎನ್. ಉತ್ತಮ್ (ಘಟ) ಪಕ್ಕವಾದ್ಯಗಳಲ್ಲಿ ಸಾಥ್ ನೀಡಿದರು.
ಸಂಸ್ಥೆಯ ಗೌರವ ಅಧ್ಯಕ್ಷ ಎಂ. ಅನಂತ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಭಾಷ್ಯಂ ಚಕ್ರವರ್ತಿ ವಂದನಾರ್ಪಣೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post