ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾಟ್ಯೇಶ್ವರ ನೃತ್ಯ ಶಾಲೆಯ ಗುರುಗಳಾದ ಕಲಾಯೋಗಿ ಕೆ.ಪಿ. ಸತೀಶ್ ಬಾಬುರವರ ಮಾರ್ಗದರ್ಶನದಲ್ಲಿ ನೃತ್ಯ ಶಾಲೆಯ 24ನೇ ಹಿರಿಯ ವಿದ್ಯಾರ್ಥಿನಿ ಕು. ಅದಿತಿ ಎಸ್. ಖಾಸ್ನೀಸ್ ರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿತು.
ವಯ್ಯಾಲಿಕಾವಲ್’ನಲ್ಲಿರುವ ಶ್ರೀಕೃಷ್ಣದೇವರಾಯ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮ ಕಲಾಸಕ್ತರನ್ನು ಮಂತ್ರಮುಗ್ದಗೊಳಿಸಿತು.
ವಾದ್ಯವೃಂದದಲ್ಲಿ ಗುರುಗಳಾದ ಕಲಾಯೋಗಿ ಕೆ.ಪಿ. ಸತೀಶ್ ಬಾಬು, ಶಿಷ್ಯೆಯರಾದ ಭುವನ ಪ್ರಕಾಶ್, ಕು.ಶ್ರೇಯಾ ಅಂದೇವಾಡಿಕರ್ (ನಾಟ್ಟುವಾಂಗ), ವಸುಧಾ ಬಾಲಕೃಷ್ಣ, (ಹಾಡುಗಾರಿಕೆ ), ಪಿ. ಜನಾರ್ದನ (ಮೃದಂಗ), ಆರ್. ಪಿ. ಪ್ರಶಾಂತ್ (ವೀಣೆ), ಗಣೇಶ್ ಕೆ.ಎಸ್. (ಕೊಳಲು), ಡಾಛಿ ಅರುಣ್ (ರಿದಂ ಪ್ಯಾಡ್), ವಾಣಿ ಸತೀಶ್ ಬಾಬು (ನಿರೂಪಣೆ ) ಮಾಡಿದರು.
Also read: ಶಿವಮೊಗ್ಗ | ಮದುವೆಯಾಗಿಲ್ಲವೆಂದು ಮನನೊಂದು ಯುವಕ ನೇಣಿಗೆ ಶರಣು
ಪಾರಂಪರಿಕ ನೃತ್ಯಬಂದಗಳಾದ ತೋಡಯ ಮಂಗಳ, ಗುರುಶ್ಲೋಕ, ನರಸಿಂಹ ಕೌತ್ವಂ, ಅರ್ಧನಾರೀಶ್ವರ ಸೃತಿ, ಪದವರ್ಣ, ದೇವರನಾಮ, ಅಷ್ಟಪದಿ ಹಾಗೂ ಕೊನೆಯಲ್ಲಿ ಪಂಚರತ್ನ ತಿಲ್ಲಾನ, ಮಂಗಳದೊಂದಿಗೆ ಸಂಪನ್ನವಾಯಿತು.
ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀನಿವಾಸ ಬಿದರಿ ಹಾಗೂ ಮಂಜುಳಾ ಜಗದೀಶ್ (ಸಪ್ತಸ್ವರ ನೃತ್ಯಾಲಯ) ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಪೋಷಕರಾದ ಶ್ರೀಧರ್ ಖಾಸ್ನೀಸ್ ಮತ್ತು ವಿಭಾ ಖಾಸ್ನೀಸ್ ಬಹಳ ವ್ಯವಸ್ಥಿತವಾಗಿ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post