ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದಲ್ಲಿ ಭೂಗಳ್ಳರು ಮಾಡುವ ಅಕ್ರಮಗಳಿಗೆ ಕೊನೇಯೇ ಇಲ್ಲದಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಕಚೇರಿಯ #Try to sell Bangalore rural SP Office ನಕಲಿ ದಾಖಲೆ ಸೃಷ್ಟಿಸಿ ಪೊಲೀಸ್ ಕಚೇರಿ ಜಾಗವನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ. ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ.
ಹನೀಫ್ ಎಂಬಾತ ಎಸ್ ಪಿ ಕಚೇರಿಯ ಫೋಟೋ, ವಿಡಿಯೋಗಳನ್ನು ತೆಗೆದು ಗ್ರಾಹಕರಿಗೆ ಶೇರ್ ಮಾಡಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಎಸ್ ಪಿ ಕಚೇರಿಯ ವೈರ್ ಲೆಸ್ ವಿಭಾಗದ ಇನ್ಸ್ ಪೆಕ್ಟರ್ ಸಂತೋಷ್ ಗೌಡ ಪ್ರಶ್ನಿಸಿದ್ದಾರೆ. ಆಗ ಆರೋಪಿ ಜಾಗ ನನ್ನದು, ನನ್ನ ಹೆಸರಲ್ಲಿ ಜಿಪಿಎ ಇದೆ ಎಂದಿದ್ದಾನೆ. ಈ ವಿಚಾರವನ್ನು ಇನ್ಸ್ ಪೆಕ್ಟರ್ ಸಂತೋಷ್ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
Also read: ಹೊಸ ಮಸೂದೆಗಳ ಅನುಷ್ಟಾನದಿಂದ ಪ್ರಕರಣಗಳ ತ್ವರಿತ ಇತ್ಯರ್ಥ ಸಾಧ್ಯ: ನ್ಯಾ. ಮಂಜುನಾಥ ನಾಯಕ್ ಅಭಿಪ್ರಾಯ
ನಕಲಿ ದಾಖಲೆ ಸೃಷ್ಟಿಸಿ ಮಾರಲು ಮುಂದಾಗಿರುವ ಹನೀಫ್ ಸೇರಿದಂತೆ ರಾಜಶೇಖರ್, ಮೊಹಮ್ಮದ್ ನದೀಮ್, ಮೋಹನ್ ಶೆಟ್ಟಿ, ಗಣಪತಿ ಎಂಬಾತನ ಮೇಲೆ ದೂರು ದಾಖಸಿದ್ದಾರೆ. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 353, 447 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post