ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗೆಜ್ಜೆ ಪೂಜೆ ಎನ್ನುವುದು ನರ್ತಕಿಯ ಜೀವನದ ಮಹತ್ತರ ಘಟ್ಟ. ಗೆಜ್ಜೆಪೂಜೆಯ ಮೂಲಕ ತಮ್ಮ ನೃತ್ಯ ಜೀವನದಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯವಾಗುತ್ತದೆ. ಹೀಗೊಂದು ಗೆಜ್ಜೆ ಪೂಜೆಯು ಶ್ರೀ ಗಣೇಶ ನೃತ್ಯಾಲಯ ಅರಿಶಿನಕುಂಟೆ ಸಂಸ್ಥೆಯ ನಿರ್ದೇಶಕ ಎಂ. ಡಿ. ಗಣೇಶ್ ಮತ್ತು ಭಾವನಾ ಗಣೇಶ್, ತಮ್ಮ ಶಿಷ್ಯೆ ಕು. ಪ್ರತೀಕ್ಷಾಳ ಗೆಜ್ಜೆ ಪೂಜೆಯನ್ನು ಕಲಾಗ್ರಾಮ ಸಭಾಂಗಣದಲ್ಲಿ ನೆರೆವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಸುಮನಾ ಆರ್. ನಾಟ್ಯಚಾರ್ಯ. ಸ್ವಾಮಿ ಎಂ, ಕ್ಯಾಪ್ಟನ್. ಮಹಾಬಲೇಶ್ವರ ತುಂಗಾ ಮತ್ತು ವೈದ್ಯ ದಂಪತಿಗಳಾದ ಡಾ. ಗೋಪಾಲ್ ಮತ್ತು ಡಾ. ನಿಶ್ಚಲ ಗೋಪಾಲ್ ಉಪಸ್ಥಿತರಿದ್ದರು.
ವೈವಿದ್ಯಮಯ ಬೆಳಕು, ಮಾಧುರ್ಯವಾದ ಸಂಗೀತದಿಂದ ಕು. ಪ್ರತೀಕ್ಷಾಳ ನೃತ್ಯ ಪ್ರಸ್ತುತಿಯು ಕಲಾರಸಿಕರ ಮನಸೊರೆಗೊಂಡಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post