ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಮ್ಮ ಮೆಟ್ರೋದಲ್ಲಿ Namma Metro ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಬಂಧಿಸಲಾಗಿದೆ.
ಆರೋಪಿ ಯುವಕನನ್ನು ಲೋಕೇಶ್ ಎಂದು ಗುರುತಿಸಲಾಗಿದ್ದು, ಮೆಟ್ರೋ ಭದ್ರತಾ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದು, ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಿನ್ನೆ ಮೆಟ್ರೋ ಹತ್ತಿದ ಈ ಯುವಕ ಹತ್ತಿದ್ದು, ಅದೇ ಬೋಗಿಯಲ್ಲಿದ್ದ 22 ವರ್ಷದ ಯುವತಿಯನ್ನು ಸ್ಪರ್ಶಿಸಿದ್ದಾನೆ. ಇದನ್ನು ವಿರೋಧಿಸಿ ಯುವತಿ ಕೂಗಿದ್ದು, ತತಕ್ಷಣವೇ ಈತ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ತತಕ್ಷಣವೇ ಎಚ್ಚೆತ್ತ ಮೆಟ್ರೋ ಭದ್ರತಾಧಿಕಾರಿಗಳು ಯುವಕನನ್ನು ವಶಕ್ಕೆ ಪಡೆದಿದ್ದಾರೆ.
Also read: ಚಿತ್ರದುರ್ಗಕ್ಕೆ ಆಗಮಿಸದೇ ಮುರುಘಾ ಮಠದ ಆಡಳಿತ ಹಿಡಿದ ಶಿವಮೂರ್ತಿ ಶರಣರು
ಯುವಕನನ್ನು ವಶಕ್ಕೆ ಪಡೆದು, ಆನಂತರ ಆತನನ್ನು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಲೋಕೇಶ್ ಈ ಹಿಂದೆಯೂ ಬಿಎಂಟಿಸಿ ಬಸ್’ನಲ್ಲಿ ಮೊಬೈಲ್ ಕಳ್ಳತನ ಮಾಡುವ ವೇಳೆ ಸಿಕ್ಕಿಬಿದ್ದಿದ್ದ ಎನ್ನಲಾಗಿದ್ದು, ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಆರೋಪಿಯಿಂದ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post