ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ನವೆಂಬರ್ 16 ರಿಂದ 23ರ ವರೆಗೆ ಪ್ರತಿದಿನ ಸಂಜೆ 7ಕ್ಕೆ ಮ||ಶಾ||ಸಂ|| ಶ್ರೀ ಚಂದ್ರಶೇಖರ ಆಚಾರ್ಯರಿಂದ “ತುಳಸಿ ವಿವಾಹ” ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ.
ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ-56000
ದಾಸನಾಗು ವೀಶೇಷನಾಗು: (ಕನಕದಾಸರ ಕೃತಿಗಳ ಗಾಯನ)
ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಪ್ರಯುಕ್ತ ನ.18ರ ಸೋಮವಾರ ಸಂಜೆ 6:30ಕ್ಕೆ ಪ್ರಕಾಶನಗರದ 10ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸುಮಲತಾ ಮಂಜುನಾಥ್ ಅವರು ಶ್ರೀ ಕನಕದಾಸರ ರಚನೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಟಿ.ಎಸ್. ರಮೇಶ್, ಮತ್ತು ತಬಲಾ ವಾದನದಲ್ಲಿ ಎಂ. ಮೋಹನ್ ಸಹಕರಿಸಲಿದ್ದಾರೆ.
ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು
ಉತ್ಥಾನ ದ್ವಾದಶಿ ಪ್ರಯುಕ್ತ “ಶ್ರೀತುಳಸಿ ವಿವಾಹ ಮಹೋತ್ಸವ”
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಉತ್ಥಾನ ದ್ವಾದಶಿ ಪ್ರಯುಕ್ತ ದೀಪೋತ್ಸವದೊಂದಿಗೆ ವಿಶೇಷವಾಗಿ ಶ್ರೀ ತುಳಸಿ ವಿವಾಹ ಮಹೋತ್ಸವವು ಶ್ರೀಮಠದ ಅರ್ಚಕರಿಂದ ನೆರವೇರಿತು ಎಂದು ಶ್ರೀ ನಂದಕಿಶೋರ ಆಚಾರ್ಯರು ತಿಳಿಸಿದರು.
Also read: ಅವರು ಶಬರಿಮಲೆ ದೇಗುಲದ ಮುಂದೆ ಭಿಕ್ಷೆ ಬೇಡುವುದು ಒಳ್ಳೆಯದು: ಶಾಸಕ ಚನ್ನಬಸಪ್ಪ ಹೀಗೆ ಹೇಳಿದ್ದೇಕೆ?
ಈ ಸಂದರ್ಭದಲ್ಲಿ ಸೇವಾಕರ್ತರು, ಭಕ್ತರು, ಶ್ರೀಮಠದ ಸಿಬ್ಬಂದಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದರು.
ತುಳಸಿ-ದಾಮೋದರ ಕಲ್ಯಾಣ, ಧಾತ್ರಿ ಹೋಮ, ಪ್ರವಚನ
ಈಜುಕೊಳದ ಬಡಾವಣೆಯ ಸುಧೀಂದ್ರನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಉತ್ಥಾನ ದ್ವಾದಶಿ ಪ್ರಯುಕ್ತ ತುಳಸಿ-ದಾಮೋದರ ಕಲ್ಯಾಣ, ಮಠದ ವಿದ್ಯಾರ್ಥಿಗಳಿಂದ ನೃತ್ಯ ಸೇವೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ನವೆಂಬರ್ 14, ಗುರುವಾರ ಬೆಳಗ್ಗೆ ಧಾತ್ರಿ ಹೋಮ, ಸಂಜೆ ಪಂಡಿತರಿಂದ ಪ್ರವಚನ ನಡೆಯಿತು ಎಂದು ಶ್ರೀಮಠದ ಗೌರವ ಕಾರ್ಯದರ್ಶಿ ಶ್ರೀ ನರಹರಿ ರಾವ್ ಮತ್ತು ರಾಜು ಕುಲಕರ್ಣಿ ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post