ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿವಿ ಪುರಂನ #VV Puram College ಪ್ರತಿಷ್ಠಿತ ಕಾಲೇಜೊಂದರ ಮುಂದೆ ನಿಂತಿದ್ದ ಯುವತಿಯರ ಎದುರು ಕಾಮುಕ ಯುವಕನೊಬ್ಬ ಪ್ಯಾಂಟ್ ಜಿಪ್ ತೆಗೆದು ಖಾಸಗೀ ಅಂಗ ತೋರಿಸಿ ಅಸಹ್ಯಕರವಾಗಿ ವರ್ತಿಸಿರುವ #misbehaved ಘಟನೆ ನಡೆದಿದೆ.
ಕಾಲೇಜಿನ ಮುಂದೆ ಯುವತಿಯರ ಗುಂಪೊಂದು ನಿಂತಿತ್ತು. ಅಲ್ಲಿಗೆ ಸ್ಕೂಟರ್’ನಲ್ಲಿ ಬಂದ ಕಾಮುಕನೊಬ್ಬ ನಡುರಸ್ತೆಯಲ್ಲೇ ಪ್ಯಾಂಟ್ ಜಿಪ್ ತೆಗೆದು ಖಾಸಗೀ ಅಂಗ ತೋರಿಸಿ ಅಸಹ್ಯವಾಗಿ ವರ್ತಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ವೀಡಿಯೋ ಈಗ ವೈರಲ್ ಆಗಿದ್ದು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ, ಇಂತಹ ಕಾಮುಕರ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
Also read: ಎಂಪಿ ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮದ್ಯ, ಬಾಡೂಟಕ್ಕೆ ಮುಗಿಬಿದ್ದ ಜನ | ವ್ಯಾಪಕ ಟೀಕೆ
ಇದು ನಾಚಿಕೆಗೇಡಿನ ಸಂಗತಿ ಆತನನ್ನು ಆದಷ್ಟು ಬೇಗ ಬಂಧಿಸಬೇಕು. ಆತನ ಗಾಡಿಯ ಸಂಖ್ಯೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ ಬೇಕೆಂದೇ ಆರಂಭದ ಎರಡು ನಂಬರ್ ಮುಚ್ಚಿದ್ದಾನೆ ಎಂದು ಶೀಘ್ರ ಬಂಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಲಾಗಿದೆ.
ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ಅಸಹ್ಯ ಹಾಗೂ ಅಸಭ್ಯ ವರ್ತನೆ ಮಾಡುವವರು ದಿನೇದಿನೇ ಹೆಚ್ಚಾಗುತ್ತಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post