ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ಕೃಷ್ಣರಾಜಪುರಂ ಮತ್ತು ವೈಟ್ ಫೀಲ್ಡ್ ಪ್ಯಾನಲ್ ಕ್ಯಾಬಿನ್ ನಡುವಿನ ಸುರಕ್ಷತಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಈ ಮಾರ್ಗದ ಮೆಮು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ #Railway Department ಮಾಹಿತಿ ಪ್ರಕಟಿಸಿದ್ದು, ಕೃಷ್ಣರಾಜಪುರಂ ಮತ್ತು ವೈಟ್ಫೀಲ್ಡ್ ಪ್ಯಾನಲ್ ಕ್ಯಾಬಿನ್ ನಡುವಿನ ಸುಕ್ಷತಾ ಕಾಮಗಾರಿಗಳ ಹಿನ್ನೆಲೆಯಲ್ಲಿ, ಈ ಕೆಳಗಿನ ಮೆಮು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಭಾಗಶಃ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
- ಏಪ್ರಿಲ್ 4 ರಿಂದ 9, 2025 ರವರೆಗೆ ರೈಲು ಸಂಖ್ಯೆ 66546 ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ರೈಲು ಬಂಗಾರಪೇಟೆ ಮತ್ತು ಮಾರಿಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
- ಏಪ್ರಿಲ್ 4 ರಿಂದ 9, 2025 ರವರೆಗೆ ರೈಲು ಸಂಖ್ಯೆ 66548 ಮಾರಿಕುಪ್ಪಂ-ಕೃಷ್ಣರಾಜಪುರಂ ಮೆಮು ರೈಲು ಮಾರಿಕುಪ್ಪಂ ಮತ್ತು ಬಂಗಾರಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
- ರೈಲುಗಳ ನಿಯಂತ್ರಣ ಮತ್ತು ಮರು ವೇಳಾಪಟ್ಟಿ
Also read: 68th All India Railway Cricket Championship Concludes: Northern Railway Emerges Victorious
ಮಿರಜ್ ಯಾರ್ಡ್ನಲ್ಲಿ ಅಗತ್ಯ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ, ಕೇಂದ್ರ ರೈಲ್ವೆಯು ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳು ರೈಲುಗಳ ನಿಯಂತ್ರಣ ಮತ್ತು ಮರು ವೇಳಾಪಟ್ಟಿಯನ್ನು ಒಳಗೊಂಡಿವೆ.
- ದಾದರ್-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ ಪ್ರೆಸ್ (ರೈ.ಸಂ.17318) ರೈಲು ಮಾರ್ಚ್ 31, 2025 ರಂದು ದಾದರ್ ನಿಲ್ದಾಣದಿಂದ ಹೊರಡುವ ಈ ರೈಲು ಕೇಂದ್ರ ರೈಲ್ವೆ ವ್ಯಾಪ್ತಿಯಲ್ಲಿ 90 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
- ದಾದರ್-ಪುದುಚೇರಿ ಎಕ್ಸ್ ಪ್ರೆಸ್ (ರೈ.ಸಂ.11005) ರೈಲು ಮಾರ್ಚ್ 31, 2025 ರಂದು ದಾದರ್ ನಿಲ್ದಾಣದಿಂದ ಹೊರಡುವ ಈ ರೈಲು ಕೇಂದ್ರ ವ್ಯಾಪ್ತಿಯಲ್ಲಿ 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
- ರೈಲು ಸಂಖ್ಯೆ 07363 ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ರಿಷಿಕೇಶ್ ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 31, 2025 ರಂದು 20:30 ಗಂಟೆಗೆ ಹುಬ್ಬಳ್ಳಿಯಿಂದ ಹೊರಡಬೇಕಿದ್ದ ಈ ರೈಲು, ಏಪ್ರಿಲ್ 1, 2025 ರಂದು 00:30 ಗಂಟೆಗೆ ಹೊರಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post