ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪೋಕ್ಸೋ ಪ್ರಕಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ #B S Yadiyurappa ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಮುಂದಿನ ಆದೇದವರೆಗೂ ಅವರನ್ನು ಬಂಧಿಸಿದಂತೆ ಎಸ್‌ಐಟಿಗೆ ಆದೇಶ ನೀಡಿದೆ
ಪೋಕ್ಸೋ ಪ್ರಕರಣದಲ್ಲಿ #POCSO Case ನಿನ್ನೆ ತಮ್ಮ ವಿರುದ್ಧ ಜಾರಿಯಾಗಿದ್ದ ಅರೆಸ್ಟ್ ವಾರೆಂಟ್ ರದ್ದು ಮಾಡಬೇಕು ಹಾಗೂ ಹುರುಳಿಲ್ಲದ ಈ ಪ್ರಕರಣವನ್ನು ವಜಾ ಮಾಡಬೇಕು ಎಂದು ಬಿಎಸ್‌ವೈ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ ವಿಚಾರಣೆಯನ್ನು ಎರಡು ವಾರದ ನಂತರಕ್ಕೆ ಮುಂದೂಡಿದ್ದು, ಮುಂದಿನ ಆದೇಶದವರೆಗೆ ಅವರನ್ನು ಬಂಧಿಸದಂತೆ ಸ್ಪಷ್ಟವಾಗಿ ಸೂಚಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಎಜಿ ಹಾಗೂ ಯಡಿಯೂರಪ್ಪ ಪರ ವಾದ ಆಲಿಸಿದ ನ್ಯಾಯಾಲಯ ಯಡಿಯೂರಪ್ಪ ಕೋರಿದಂತೆ ನಿರೀಕ್ಷಣಾ ಜಾಮೀನನ್ನು ಸಹ ಮಂಜೂರು ಮಾಡಿದೆ. ಅಲ್ಲದೆ ಆಕ್ಷೇಪಣೆ ಸಲ್ಲಿಸಲು ಎಜಿಗೆ ಸೂಚನೆ ನೀಡಿದೆ.
Also read: ರಾಜ್ಯ ಸರ್ಕಾರದಿಂದ ಹಗೆತನದ ರಾಜಕಾರಣ: ಟಿ.ಡಿ. ಮೇಘರಾಜ್ ಆಕ್ರೋಶ
ಯಡಿಯೂರಪ್ಪ ವಿಚಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್ ಅವರು ಜೀವನದ ಸಂಧ್ಯಾಕಾಲದಲ್ಲಿದ್ದಾರೆ ಇಂತಹ ವಯೋಮಾನದಲ್ಲಿ ಸಹಜ ಆರೋಗ್ಯ ಸಮಸ್ಯೆಗಳು ಅವರಿಗಿರುತ್ತವೆ ಅವರ ಮೇಲೆ ಮುಂದಿನ ವಿಚಾರಣೆವರೆಗೂ ಒತ್ತಾಯದ ಕ್ರಮ ತೆಗೆದುಕೊಳ್ಳುವಂತಿಲ್ಲ. ಅಲ್ಲದೇ ಯಡಿಯೂರಪ್ಪ ಸ್ವಭಾವತಹ ಓಡಿ ಹೋಗುವ ವ್ಯಕ್ತಿಯಲ್ಲ ಎಂದಿದೆ.
ಯಡಿಯೂರಪ್ಪ ಪರ ವಾದ ಮಂಡಿಸಿದ ವಕೀಲರು ಈಗಾಗಲೇ ಎರಡು ಭಾರಿ ನೀಡಲಾಗಿದ್ದ ನೋಟಿಸ್‌ನಂತೆ ವಿಚಾರಣೆ ಎದುರಿಸಿದ್ದಾರೆ. ಈ ಬಾರಿ ದೆಹಲಿಯಲ್ಲಿ ರಾಜಕೀಯ ಸಭೆಗಳಿರುವ ಕಾರಣ ಅವರು ಮುಂದಿನ ದಿನಾಂಕ ಕೇಳಿದ್ದರು. ಅಲ್ಲದೆ ಪ್ರಕರಣದ ತನಿಖೆಗೆ ಯಡಿಯೂರಪ್ಪ ಸಂಪೂರ್ಣ ಸಹಕಾರ ನೀಡಿದ್ದರೂ ಸಹ ಉದ್ಧೇಶಪೂರ್ವಕವಾಗಿ ಆತುರಾತುರವಾಗಿ ಅರೆಸ್ಟ್ ವಾರೆಂಟ್ ತಂದಿದ್ದಾರೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.
ಈ ವಾದವನ್ನು ಆಲಿಸಿದ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಯಡಿಯೂರಪ್ಪ ಸಹಕಾರ ನೀಡಿಲ್ಲ ಹಾಗೂ ಓಡಿ ಹೋಗುತ್ತಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಆಧಾರಗಳಿಲ್ಲ ಎಂದು ಎಜಿ ವಾದವನ್ನು ತಿರಸ್ಕರಿಸಿ ಯಡಿಯೂರಪ್ಪ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ಜೂನ್ ೧೭ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post