ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿಯಲ್ಲಿ ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವುದು ನಿಶ್ಚಿತವಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಕೃತ ಪ್ರಮಾಣಪತ್ರಗಳು ಸಿದ್ದವಾಗುತ್ತಿದ್ದು, ಅತಿ ಶೀಘ್ರದಲ್ಲೇ ಆಟೋ ಪ್ರಯಾಣ ದರ ಏರಿಕೆ #Auto Travel fare increase ಬಗ್ಗೆ ಸರ್ಕಾರದಿಂದ ಪ್ರಕಟಣೆ ಹೊರ ಬೀಳಲಿದೆ ಎಂದು ವರದಿಯಾಗಿದೆ.
ಬೆಂಗಳೂರು ನಗರದಲ್ಲಿ ನೂತನ ದರ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಆಟೋ ಚಾಲಕರ ಬೇಡಿಕೆಗಳು, ಪ್ರಯಾಣಿಕರ ಅನುಕೂಲತೆ, ಸರ್ಕಾರದ ತಾರತಮ್ಯ ಎಲ್ಲವೂ ಒಂದೇ ವೇದಿಕೆಯಲ್ಲಿ ಭೇಟಿಯಾದ ಬಳಿಕ ಈ ನಿರ್ಧಾರ ಹೊರ ಬಿದ್ದಿದೆ ಎಂದು ಹೇಳಿದೆ.
2021ರ ನವೆಂಬ3ರ್’ನಲ್ಲಿ ದರ ಪರಿಷ್ಕರಣೆ ಆಗಿದ್ದು, ಅದಾದ ನಂತರವೂ ಸಹ ಇಂಧನ ಬೆಲೆ, ನಿರ್ವಹಣಾ ವೆಚ್ಚ ಹಾಗೂ ಇತರೆ ಸೌಲಭ್ಯಗಳ ಮೇಲೆ ಹೆಚ್ಚಿದ ಒತ್ತಡದಿಂದ ಆಟೋ ಚಾಲಕರು ಇನ್ನಷ್ಟು ದರ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಮೊದಲ 1.9 ಕಿಮೀಗೆ ರೂ.30ರಿಂದ 36ಕ್ಕೆ ಏರಿಸಲಾಗಿದೆ. ನಂತರದ ಪ್ರತಿ ಕಿಮೀಗೆ 15ರಿಂದ 18 ರೂ. ವಿಧಿಸಲಾಗುತ್ತದೆ. ಇದು ಶೇ.20ರಷ್ಟು ದರ ಏರಿಕೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post