ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿ ಬೆಂಗಳೂರಿನ ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ Bomb threat to schools ಇ ಮೇಲ್’ಗಳನ್ನು ಗಮನಿಸಿದರೆ ಇದೊಂದು ಭಯೋತ್ಪಾದಕ ಕೆಲಸದಂತೆ ಕಾಣುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ RAshok ಸಂಶಯ ವ್ಯಕ್ತಪಡಿಸಿದ್ದಾರೆ.
ಬಾಂಬ್ ಬೆದರಿಕೆ ಬಂದಿದ್ದ ಬಸವೇಶ್ವರ ನಗರದ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಇಮೇಲ್’ಗಳನ್ನು ನೋಡಿದರೆ ಭಯೋತ್ಪಾದಕ ಕೃತ್ಯದಂತೆ ಅನಿಸುತ್ತದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಬಾಂಬ್ ಬೆದರಿಕೆ ಇ-ಮೇಲ್’ನಲ್ಲಿ ಮುಸ್ಲಿಂ, ಅಲ್ಲಾಹು, ದೇವಸ್ಥಾನ, ಮುಂಬೈ ಹೋಟೆಲ್ ಮೇಲಿನ ದಾಳಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಬೆಂಗಳೂರನ್ನು ಭಯ ಬೀಳಿಸುವ ಹಾಗೂ ದೇಶಕ್ಕೆ ಬೆದರಿಕೆ ಹಾಕುವ ಉz್ದೆÃಶದಿಂದ ಇದನ್ನು ಮಾಡಲಾಗಿದೆ. ಇದನ್ನು ಖಂಡಿಸುತ್ತೇನೆ ಎಂದರು.
Also read: ಭ್ರೂಣ ಹತ್ಯೆ ಕೇಸ್ | ನರ್ಸ್ ಬಿಚ್ಚಿಟ್ಟ ಭಯಾನಕ ಸತ್ಯ | ಮನುಷ್ಯರು ಮಾಡದ ಕೃತ್ಯಗಳಿವು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post