Read - < 1 minute
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿರುವ ಪರಿಣಾಮ ಹಲವು ನೀತಿ ಹಾಗೂ ನಿಯಮಾವಳಿಗಳನ್ನು ಪೊಲೀಸ್ ಇಲಾಖೆ ಜಾರಿಗೊಳಿಸುತ್ತಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಈ ಕುರಿತಂತೆ ಹೊಸ ರೂಲ್ಸ್ ಜಾರಿಗೊಳಿಸಿದ್ದು, ಇದರ ಕಟ್ಟುನಿಟ್ಟಿನ ಜಾರಿಗೆ ಆದೇಶಿಸಿದ್ದಾರೆ.
ಹೀಗಿವೆ ರೂಲ್ಸ್’ಗಳು:
- ಎಲ್ಲ ರೀತಿಯ ಪತ್ರಕರ್ತರು ತಮ್ಮ ಸಂಸ್ಥೆಯ ಐಡಿ ಕಾರ್ಡ್ ತೋರಿಸಿ ಓಡಾಡಲು ಅವಕಾಶವಿದ್ದು, ಪೊಲೀಸ್ ಇಲಾಖೆಯಿಂದ ಯಾವುದೇ ಪಾಸ್ ನೀಡುವುದಿಲ್ಲ.
- ರಾಜ್ಯ, ಕೇಂದ್ರ, ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಅವಕಾಶ ಕೊಡಬೇಕು
- ಪರ್ಸನ್ ಪಾಸ್ ಹೊಂದಿರುವವರಿಗೆ ಓಡಾಡಲು ಅವಕಾಶ ಮಾಡಿಕೊಡಬೇಕು
- ಬೆಂಗಳೂರಿನಲ್ಲಿ ಹಲವು ಕಲ್ಯಾಣ ಮಂಟಪಗಳನ್ನು ಸರ್ಕಾರ ಬುಕ್ ಮಾಡಿದ್ದು, ಬೆಂಗಳೂರಿನಿಂದ ಉತ್ತರ ಕರ್ನಾಟಕದ ಕಡೆ ವಲಸೆ ಹೋಗುತ್ತಿರುವ ಜನರನ್ನು ಅಲ್ಲಿಗೆ ಕಳುಹಿಸಬೇಕು
- ಮುಂಜಾನೆ ವಾಕಿಂಗ್’ಗೆ ಅವಕಾಶವಿಲ್ಲ. ಆದರೆ, ಸಾಕಿರುವ ನಾಯಿ ಇದ್ದರೆ ಅವರಿಗೆ ಮನೆ ಸನಿಹದಲ್ಲೇ ವಾಕಿಂಗ್ ಹೋಗಿ, ತುರ್ತಾಗಿ ಮನೆಗೆ ಹಿಂದಿರುಗಬೇಕು
- ಪೊಲೀಸ್ ಸಿಬ್ಬಂದಿಗಳು ಜನರೊಂದಿಗೆ ಅನಗತ್ಯವಾಗಿ ವಾದ ಮಾಡಬಾರದು
- ಅನಾವಶ್ಯಕವಾಗಿ ತಿರುಗಾಡುವವರ ವಾಹನವನ್ನು ತತಕ್ಷಣವೇ ಜಪ್ತಿ ಮಾಡಿ, ಲಾಕ್ ಡೌನ್ ಮುಕ್ತಾಯಗೊಂಡ ನಂತರ ಹಿಂತಿರುಸಬೇಕು
- ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳನ್ನು ನಿಲ್ಲಿಸಬೇಕು. ಎಮರ್ಜನ್ಸಿ ಇದ್ದರೆ ಮಾತ್ರ ಬಿಡಬೇಕು, ಆಯಾ ಜಾಗದಲ್ಲಿ ಪೊಲೀಸರೂ ಇರಬೇಕು
- ಲಾಠಿ ಉಪಯೋಗಿಸಬೇಡಿ. ಹಾಗೆ ವೆಹಿಕಲೇ ಸೀಜ್ ಮಾಡಿದರೆ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು. ಪಿಜಿಗಳ ಮಾಲೀಕರು ತೊಂದರೆ ಕೊಡುತ್ತಿದ್ದರೆ ಅವರಿಗೆ ಎಚ್ಚರಿಕೆ ನೀಡಬೇಕು. ಪಿಜಿಯಲ್ಲೇ ಊಟದ ವ್ಯವಸ್ಥೆ ಮಾಡಬೇಕು
- ಹಾಲು, ಪೇಪರ್, ತರಕಾರಿ ಮಾರಾಟಗಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು
- ಕ್ಯಾಶ್ ಬ್ಯಾಕ್ ಎಟಿಎಂನಲ್ಲಿ ಕಾರ್ಯನಿರ್ವಹಿಸುವವರಿಗೆ ಪಾಸ್ ಇರಲಿ, ಇಲ್ಲದಿರಲಿ ಅವರನ್ನು ತಡೆಹಿಡಿಯಬಾರದು
- ದಿನಸಿ ಅಂಗಡಿ, ಮಾರ್ಟ್’ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪೇಂಟ್’ನಲ್ಲಿ ಬಾಕ್ಸ್’ಗಳನ್ನು ಬರೆಸಬೇಕು
- ಎಲ್ಲಾ ಕಡೆ ಪಾಸ್ ಗಳು ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ಇಶ್ಯೂ ಆಗಿದೆ ಇದನ್ನು ಎಸಿಪಿಗಳು ಪರಿಶೀಲಿಸಬೇಕು. ಊಟ ಪೂರೈಕೆ ಹಾಗೂ ಅಗತ್ಯ ಇರುವವರಿಗೆ ಮಾತ್ರ ಪಾಸ್ ನೀಡಬೇಕು. ಅದನ್ನು ಇಟ್ಟುಕೊಂಡು ಓಡಾಡುವವರನ್ನು ಕೂಡ ಪರಿಶೀಲನೆ ಮಾಡಬೇಕು
- ಎಲ್ಲ ಪೊಲೀಸ್ ಠಾಣೆಯಲ್ಲಿ ಪಿಆರ್’ಓ ಆಫೀಸ್ ಸೃಜಿಸಿ ಜನರಿಗೆ ಸರಿಯಾಗಿ ಸ್ಪಂದಿಸಬೇಕು. ಸಮಸ್ಯೆ ಸರಿ ಹೋಗಿಲ್ಲ ಅಂದಲ್ಲಿ ಡಿಸಿಪಿ, ಎಸಿಪಿಗಳ ಹತ್ತಿರ ಕಳುಹಿಸಬೇಕು. ಜನರಿಗೆ ಅವಮಾನ ಮಾಡದೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು
- ಡಯಾಲಿಸಿಸ್ ರೀತಿ ಕೆಲವು ವೈದ್ಯಕೀಯ ನೆರವು ಬೇಕಾದವರಿಗೆ ಹೊಯ್ಸಳ ವಾಹನ ಪಿಕಪ್ ಅಂಡ್ ಡ್ರಾಪ್ ಮಾಡಬೇಕು
Get in Touch With Us info@kalpa.news Whatsapp: 9481252093
Discussion about this post