ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಸಿಎಂ ಬದಲಾವಣೆ ಸುಳಿವು ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಜಟಾಪಟಿ ಶುರುವಾಗುತ್ತಿದ್ದು, ಹಿಂದುಳಿದ ಜಾತಿಯವರಿಗೆ ಸಿಎಂ ಸ್ಥಾನ ನೀಡುವಂತೆ ಹಿಂದುಳಿದ ಜಾತಿಗಳ ಮುಖಂಡ ಹಾಗೂ ಹಿರಿಯ ಹೋರಾಟಗಾರ ಹೆಚ್. ನರಸಿಂಹಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ರಾಜ್ಯದ 102 ಹಿಂದುಳಿದ ವರ್ಗಗಳ ಮುಖಂಡರು ಇಂದು ಉಪಸ್ಥಿತರಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ಸ್ವಲ್ಪ ಜನ ಬರಲಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದೆ. ನಾವು ಏನು ಮಾಡುತ್ತೇವೆ. ನಮ್ಮ ಕಾರ್ಯ ಏನು ಎಂಬ ಆಧಾರದ ಮೇಲೆ ಪ್ರಧಾನಿಯವರು ಮತ್ತು ಪಕ್ಷ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದರು.
ಸದ್ಯ 72 ಜನರಲ್ಲಿ 27 ಜನರಿಗೆ ಹಿಂದುಳಿದ ವರ್ಗದವರಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಇದುವರೆಗೂ ಹಿಂದುಳಿದ ವರ್ಗ ಅಂದರೆ ವೋಟ್ ಬ್ಯಾಂಕ್ ಆಗಿತ್ತು. ಆದರೆ ಈಗ ಬದಲಾಗಿದೆ. ಅತ್ಯಂತ ಸಾಮಾನ್ಯ ವರ್ಗಗಳ ಜನರು ಕೂಡಾ ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. ಇದರ ಕೃತಜ್ಞತೆಯನ್ನು ಪ್ರಧಾನಿವರಿಗೆ ಸಲ್ಲಿಸುತ್ತೇನೆ ಎಂದರು.
ನಮ್ಮ ರಾಜ್ಯದ ಮಂತ್ರಿಮಂಡಲ ಕೆಲವೇ ವರ್ಗಗಳಿಗೆ ಮೀಸಲಾಗಿದೆ. ಇದು ಎಲ್ಲಾ ವರ್ಗಗಳಿಗೆ ಸೇರಬೇಕು. ಬಿಜೆಪಿ ಕೇವಲ ಒಂದೇ ಒಂದು ಜಾತಿಯನ್ನು ನಂಬಿಕೊಂಡು ಹೋದರೆ 30-40 ಸೀಟ್ ಬರಬಹುದು. ಎಲ್ಲಾ ವರ್ಗಗಳು ಒಟ್ಟಿಗೆ ಇಲ್ಲ ಅಂದರೆ ಸರ್ಕಾರ ರಚನೆ ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಕರ್ನಾಟಕದಲ್ಲಿ ಎರಡು ವರ್ಷ ಸರ್ಕಾರ ಮಾಡಿದೆ. ಮುಂದೆ ಏನಾಗಲಿದೆ ಗೊತ್ತಿಲ್ಲ. ಅಧಿಕಾರ ವರ್ಗಾವಣೆ ತುಂಬಾನೆ ಮುಖ್ಯವಾದುದು. ಇದರಲ್ಲಿ ಎಲ್ಲಾ ವರ್ಗಗಗಳಿಗೆ ಸಮಾನ ಸ್ಥಾನ ಸಿಗಬೇಕು. ಒಂದು ವರ್ಗದಿಂದ ಇಬ್ಬರು, ಇನ್ನೊಬ್ಬರಿಂದ ಇಬ್ಬರ ಹೆಸರು ಕೇಳಿ ಬರುತ್ತಿದೆ. ಆದರೆ ಹಿಂದುಳಿದ ವರ್ಗದಿಂದ ಯಾವುದೇ ಹೆಸರು ಬರುತ್ತಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರಕ್ಕೆ ನಾವು ಮನವಿ ಕೊಡುತ್ತೇವೆ. ರಾಜ್ಯಪಾಲರು ಕೂಡಾ ಹಿಂದುಳಿದ ವರ್ಗದವರು. ಅವರಿಗೂ ಕೂಡಾ ನಾವು ಕೇಳುತ್ತೇವೆ. ಅಡ್ವೈಸರಿ ಕೌನ್ಸಿಲ್ ಮಾಡಬೇಕು. ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಕಮಿಟಿಯಲ್ಲಿ ಚರ್ಚೆಯಾಗಬೇಕು ಎಂದರು.
ಸಿಎಂ ಮನೆಗೆ ಸ್ವಾಮೀಜಿಗಳ ಭೇಟಿ ವಿಚಾರ:
ಸ್ವಾಮೀಜಿಗಳಿಗೆ ಮಠಗಳಲ್ಲಿ ಮಾಡಲು ಬಹಳಷ್ಟು ಕೆಲಸ ಇದೆ. ಅದನ್ನು ಬಿಟ್ಟು ಮಂತ್ರಿಗಳ ರೀತಿಯಲ್ಲಿ ಕೆಲಸ ಮಾಡುವುದು ಸರಿಯಿಲ್ಲ. ಸ್ವಾಮೀಜಿಗಳಂದ್ರೆ ಶೃಂಗೇರಿ ಶ್ರೀಗಳ ರೀತಿ ಇರಬೇಕು. ಸುತ್ತೂರು ಸ್ವಾಮೀಜಿಗಳು ಕೂಡ ಬಂದಿರಲಿಲ್ಲ. ಮಠ ಹಾಗೂ ಭಕ್ತರ ನಡುವೆ ಒಡನಾಟ ಇರಬೇಕು. ಅದನ್ನು ಬಿಟ್ಟು ಬಿಸಿನೆಸ್ ಮಾಡುವುದಕ್ಕೆ ಸ್ವಾಮೀಜಿಗಳು ಮುಂದಾಗಬಾರದು ಎಂದರು.
ಸುತ್ತೂರು ಸ್ವಾಮಿಗಳ ಹತ್ತಿರ ಎಲ್ಲರೂ ಹೋಗ್ತಾರೆ. ಆದ್ರೆ ಅವರು ಬಂದಿಲ್ಲ ಎಂದು ಹಿಂದುಳಿದ ವರ್ಗಗಳನ್ನು ಬಳಸಿಕೊಳ್ಳಲು ಕಾಂಗ್ರೆಸ್ ಬಹಳ ಪ್ರಯತ್ನ ಮಾಡುತ್ತಿದೆ. ಅನೇಕ ಭಾಗ್ಯಗಳು ಕೂಡಾ ಬಂದ್ವು, ಆದರೆ ಅವೆಲ್ಲವೂ ಕೂಡಾ ದುರ್ಭಾಗ್ಯವಾಗೋಯು ಎಂದು ಮಾರ್ಮಿಕವಾ ನುಡಿದಿದ್ಧಾರೆ.
ಈಶ್ವರಪ್ಪ, ಪೂರ್ಣಿಮಾ, ಕೋಟಾ ಶ್ರೀನಿವಾಸ ಪೂಜಾರಿ, ಸುನೀಲ್ ಈ ನಾಲ್ಕು ಜನರಲ್ಲಿ ಯಾರನ್ನಾದರೂ ಮಂತ್ರಿ ಮಾಡಲಿ ಎಂದು ಕ್ಷತ್ರಿಯ ಸಮಾಜದ ಮುಂಖಡ ಲಕ್ಷೀಕಾಂತ ರಾಜು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post